ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವುಗಳು ಮುಂದುವರೆದಿದ್ದು ಇಂದು ರಾಜ್ಯದಲ್ಲಿ ಒಂದೇ ದಿನ 6 ಜನ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಮಂಗಳೂರು, ದಾವಣಗೆರೆ, ವಿಜಯನಗರ ಮಂಡ್ಯ ಸೇರಿದಂತೆ ಒಟ್ಟು 6ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ.
ರಾಯಚೂರಲ್ಲಿ ನರಳಾಡಿ ಪ್ರಣಾಬಿಟ್ಟ ವ್ಯಕ್ತಿ!
ರಾಯಚೂರಿನ ಮಸ್ಕಿ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಪಗಡದಿನ್ನಿ ಕ್ಯಾಂಪ್‌ನ ಶರಣಬಸವ (32) ಎಂಬ ವ್ಯಕ್ತಿ ಎದೆನೋವಿನಿಂದ ನರಳುತ್ತಿದ್ದ ಶರಣಬಸವನನ್ನು ಆತನ ಸ್ನೇಹಿತರು ಚಿಕಿತ್ಸೆಗಾಗಿ ಬೈಕ್ ನಲ್ಲಿಯೇ ಮಸ್ಕಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.
ಆದರೆ ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಅಲ್ಲಿದ್ದ ನರ್ಸ್‌ಗಳು ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಕೂಡ ಫಲಕಾರಿಯಾಗಿರಲಿಲ್ಲ. ಪ್ರಾಣ ಉಳಿಸಲು ಆತನ ಸ್ನೇಹಿತರು, ಸಂಬಂಧಿಕರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಬಳಿಕ ಆರೋಗ್ಯ ಕೇಂದ್ರದಿಂದ ಸಿಂಧನೂರು ತಾಲೂಕಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನರಳಾಡಿ ಸಾವನ್ನಪ್ಪಿದ್ದಾರೆ.
ಬಸ್ ನಲ್ಲಿ ಪ್ರಯಾಣಿಸುವಾಗಲೇ ಹಾರ್ಟ್ ಅಟ್ಯಾಕ್!
ಹಾಸನ ಮೂಲದ ವ್ಯಕ್ತಿಯೊಬ್ಬ ಬಸ್ ನಲ್ಲಿ ಪ್ರಯಾಣಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.ಹಾಸನ ಜಿಲ್ಲೆಯ ದೊಡ್ಡಮಂಡಿಗನಹಳ್ಳಿಯ ವೆಂಕಟೇಶ್ (55) ಮೃತ ದುರ್ದೈವಿಯಾಗಿದ್ದು, ಬೆಂಗಳೂರು ಸಮೀಪದ ಸೋಲೂರಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.ಕಳೆದ 3 ವರ್ಷಗಳಿಂದ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ವೆಂಕಟೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ಮೃತದೇಹ ರವಾನಿಸಲಾಗುತ್ತಿದೆ.
ಇಂಜಿನಿಯರ್ ವಿದ್ಯಾರ್ಥಿ ಸಾವು!
ಮಂಗಳೂರಿನ ಸುರತ್ಕಲ್ ಕೃಷ್ಣಾಪುರದಲ್ಲಿ ಮನೆಯಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಸುರತ್ಕಲ್ ಕೃಷ್ಣಾಪುರದಲ್ಲಿನ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಮನೆಯಲ್ಲೇ ಕುಸಿದು ಬಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿ ಅಫ್ತಾಬ್ (18) ಜೀವಬಿಟ್ಟಿದ್ದಾರೆ.
ಎದೆ ನೋವಿನಿಂದ ಕುಸಿದುಬಿದ್ದು ಸಾವು!
ಇದೀಗ ಮತ್ತೊಂದೆಡೆ ದಾವಣಗೆರೆಯಲ್ಲೂ ಕೂಡ ಎದೆ ನೋವು ಕಾಣಿಸಿಕೊಂಡು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ದಾವಣಗೆರೆ ತಾಲೂಕಿನ ನಾಗರಕಟ್ಟೆಯ ಮಂಜ್ಯಾ ನಾಯಕ್ (38) ಸಾವನ್ನಪ್ಪಿದ್ದಾರೆ.ಮನೆಯಲ್ಲಿಯೇ ಎದೆ ನೋವು ಕಾಣಿಸಿಕೊಂಡು ಮಂಜ್ಯಾ ನಾಯಕ್ ಕುಸಿದು ಬಿದ್ದಿದ್ದಾರೆ. ತಕ್ಷಣ ಕುಟುಂಬಸ್ಥರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಂಜ್ಯಾ ನಾಯಕ ಮೃತಪಟ್ಟಿದ್ದಾರೆ.
ಅಂಗಡಿಯಲ್ಲಿದ್ದಾಗಲೇ ‘ಹೃದಯಾಘಾತ’!
ಇನ್ನು, ವಿಜಯನಗರ ಜಿಲ್ಲೆಯಲ್ಲೂ ಕೂಡ ಹೃದಯಾಘಾತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದಾರೆ. ಅಂಗಡಿಯಲ್ಲಿ ಕುಸಿದು ಬಿದ್ದು ಜಯಾಬಾಯಿ (52) ಮತಪಟ್ಟಿದ್ದಾರೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಿದ್ದಗಿ ತಾಂಡಾ ನಿವಾಸಿಯಾಗಿರುವ ಜಯಾಭಾಯಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ನೀರು ಕುಡಿಯುತ್ತಲೇ ಉಸಿರು ಚೆಲ್ಲಿದ ವ್ಯಕ್ತಿ!
ನೀರು ಕುಡಿಯುತ್ತಿದ್ದಾಗ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ನೀರು ಕುಡಿಯುವಾಗಲೇ ಬಿದ್ದು ಪುಟ್ಟಸ್ವಾಮಿ (55) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿಯಲ್ಲಿ ಈ ಒಂದು ದುರಂತ ನಡೆದಿದೆ. ಜಮೀನಿನಿಂದ ಮೇಕೆಗೆ ಮೇವಿಗೆ ತಂದಿರುತ್ತಾರೆ. ಈ ವೇಳೆ ಮನೆಯವರ ಬಳಿ ನೀರು ಪಡೆದು ನೀರು ಕುಡಿಯುವಾಗಲೇ ಪುಟ್ಟಸ್ವಾಮಿ ಏಕಾಏಕಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.