ಬೆಂಗಳೂರು : ಇತ್ತೀಚಿಗೆ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಿಟಿಕೆಡಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ ಪ್ರಕರಣ ನಡೆದಿತ್ತು. ಆದರೆ ಇದೀಗ ಗೃಹಸಚಿವ ಡಾ. ಜಿ.ಪರಮೇಶ್ವರ್ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ಆರೋಪದ ಮೇಲೆ, ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು IT Act ಹಾಗೂ BNS ಸೆಕ್ಷನ್ 299 ಅಡಿಯಲ್ಲಿ ಈ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಿಂದೂ ಜಾಗೃತನಾಗು’ ಎಂಬ ಎಕ್ಸ್ ಖಾತೆಯಿಂದ ಈ ವಿವಾದಾತ್ಮಕ ಪೋಸ್ಟ್ ಮಾಡಲಾಗಿದೆ. ಪೋಸ್ಟ್ನಲ್ಲಿ ಗೃಹಸಚಿವರನ್ನು ಉದ್ದೇಶಿಸಿ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ.ಪೋಸ್ಟ್ ಗೃಹಸಚಿವರ ಕುರಿತು ಮಾತ್ರವಲ್ಲದೆ, ಎರಡು ಧರ್ಮದವರ ನಡುವೆ ನಾಗರಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಮತ್ತು ದ್ವೇಷಪೂರಿತವಾಗಿ ಆಘಾತವನ್ನುಂಟುಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ.








