ಬೆಂಗಳೂರು : 70 ಸಾವಿರ ರೂ.ಲಂಚ ಪಡೆಯುತ್ತಿರುವಾಗಲೇ ದೇವನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಅಂಬರೀಶ್ ಎಂಬುವರ 70 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆ ಬಿದ್ದಿದ್ದಾರೆ.
ಪೋಕ್ಸೋ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲಂಚ ಸ್ವೀಕರಿಸುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಯುವತಿ ಕಡೆಯವರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಎಸ್ ಐ ಜಗದೇವಿ. 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಪಿಎಸ್ ಐ ಜಗದೇವಿ. ಈ ಹಿಂದೆ 5 ಸಾವಿರ ರೂ. ನೀಡಿದ್ದು, ಇಂದು 70 ಸಾವಿರ ರೂ. ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಿಎಸ್ ಐ ಜಗದೇವಿ ಪರ ಲಂಚ ಸ್ವೀಕರಿಸುತ್ತಿದ್ದ ಪಿಸಿ ಅಂಬರೀಶ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ. ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಪಿಎಸ್ ಐ ಜಗದೇವಿ, ಪಿಸಿ ಮಂಜುನಾಥ್ ಪರಾರಿಯಾಗಿದ್ದಾರೆ. ಪಿಸಿ ಅಂಬರೀಶ್ ನನ್ನು ವಶಕ್ಕೆ ಪಡೆದು ದೇವನಹಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.