ದಾವಣಗೆರೆ : ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರಗೆ ಜೀವ ಬೆದರಿಕೆ ಇದ್ದು ನನಗೆ ಜೀವ ಬೆದರಿಕೆ ಇದೆ ಎಂದು ಸಂಸದ ಜಿಎಂ ಸಿದ್ದೇಶ್ವರ ಹೇಳಿದ್ದಾರೆ. ನನ್ನ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ ಕಾಲು ತೆಗೆಯಬೇಕು ವಿಷ ಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಾವಣಗೆರೆಯ ಸಂಸದ ರಾಗಿರುವ ಜಿಎಂ ಸಿದ್ದೇಶ್ವರ ರವರು ಸ್ಪೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದು, ಹಾಗಾಗಿ ಎಲ್ಲೇ ಹೋದರು ನಾನು ಎಚ್ಚರದಿಂದ ಇರುತ್ತೇನೆ ನನಗೆ ಯಾರೇ ಏನೇ ಕೊಟ್ಟರೂ ನಾನು ತಿನ್ನುವುದಿಲ್ಲ ಎಂದು ಅವರು ತಿಳಿಸಿದರು.
ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ಫ್ರೆಂಡ್ಸ್ ಸರ್ಕಲ್ ನಲ್ಲಿ ನನ್ನ ತೆಗೆಯುವುದಕ್ಕೆ ಸಂಚುರೂಪಿಸಲಾಗಿದೆ ಎಂದು ಸ್ಪೋಟವಾದ ಅಂತ ಹೇಳಿಕೆ ನೀಡಿದ್ದಾರೆ.