ಬೆಳಗಾವಿ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಮುಖ್ಯ ಶಿಕ್ಷಕ ನೊಬ್ಬ ವಿದ್ಯಾರ್ಥಿಯ ಮೇಲೆ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದು, ಪೋಷಕರಿಗೆ ವಿದ್ಯಾರ್ಥಿ ಕರೆ ಮಾಡಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಿನ ದಿನಗಳಲ್ಲಿ ಹೊಸ ಶಾಸನ ಜಾರಿಗೆ ತರಲಾಗುತ್ತದೆ ಎಂದು ತಿಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಧ್ಯಮಗಳ ಮೂಲಕ ನನಗೆ ಈತರ ಸುದ್ದಿ ತಿಳಿಯಿತು. ಯಾರ ಮೇಲೆ ದೌರ್ಜನ್ಯ ಆದರೂ ಕೂಡ ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಆಗಿರುವಂತದ್ದನ್ನು ನೋಡಿ ನನಗೆ ತುಂಬಾ ಸಂಕಟವಾಗಿದೆ. ಯಾರು ಇದನ್ನು ಮಾಡಿದ್ದಾರೆ ಅಂತವರು ವಿರುದ್ಧ ಕಠಿಣ ಶಿಕ್ಷೆ ಹಾಗೂ ಅವರನ್ನು ಬಿಡುವುದಿಲ್ಲ ಮಕ್ಕಳ ಆಯೋಗದಿಂದ ಕೂಡ ನಾವು ಎಫ್ಐಆರ್ ಮಾಡುತ್ತೇವೆ ಎಂದರು.
ಈ ರೀತಿ ರಾಕ್ಷಸ ಪ್ರವರ್ತಿಯನ್ನ ಬೇರು ಮಟ್ಟದಿಂದ ತೆಗೆದು ಹಾಕಲಿಕ್ಕೆ ಏನೇನು ಮಾಡಬೇಕು ಅದನ್ನು ಖಂಡಿತವಾಗಿ ಮಾಡುತ್ತೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಕ್ಕಳ ಇಲಾಖೆ ಪ್ರತಿನಿಧಿಸುವಂತಹ ನಾನು ಈ ಒಂದು ಘಟನೆಯನ್ನ ಖಂಡಿಸುತ್ತೇನೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ತಕ್ಕ ಶಾಸ್ತಿ ಕೂಡ ಮಾಡುತ್ತೇನೆ. ಈ ರೀತಿ ಕಠಿಣ ಶಿಕ್ಷೆ ನೀಡಿದರೆ, ಮುಂದೆ ಯಾವುದೇ ವ್ಯಕ್ತಿ ಈ ರೀತಿ ಮಾಡಲು ಹಿಂದೆ ಮುಂದೆ ಯೋಚನೆ ಮಾಡಬೇಕು.
ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಕಠಿಣಬದ್ಧ ಶಾಸನವನ್ನು ತರಲಿಕ್ಕೆ ಎಲ್ಲ ರೀತಿಯಿಂದ ತಯಾರಿ ಮಾಡಿಕೊಳ್ಳುತ್ತೇನೆ. ಸಂಬಂಧಪಟ್ಟಂತ ಅಧಿಕಾರಿಗಳೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೇನೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚಿಸುತ್ತೇನೆ ಎಂದು ತಿಳಿಸಿದರು.