ಚಾಮರಾಜನಗರ : ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ಮತ್ತು ಆತನ ಗ್ಯಾಂಗ್ ಡ್ರಗ್ಸ್ ಪಾರ್ಟಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹೊರವಲಯದಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದಾರೆ. ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ರೆಸಾರ್ಟ್ ನಲ್ಲಿ ಈ ಪಾರ್ಟಿ ಮಾಡಿದ್ದಾರೆ.
ಕಾಂಗ್ರೆಸ್ನ ಪ್ರಭಾವಿ ಶಾಸಕ ಮತ್ತು ಸಚಿವರ ಅತ್ಯಾಪ್ತನಾಗಿರುವ ಫಯಾಜ್ ಖಾನ್ ರೌಡಿಶೀಟರ್ ಜಹೀರ್ ಹಾಗೂ 50ಕ್ಕೂ ಹೆಚ್ಚು ಸಹಚರರು ಈ ಒಂದು ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿಯಲ್ಲಿ ಗಾಂಜಾ ಮತ್ತು ಚರಜ್ ಸೇವಿಸಿ ಜಹೀರ್ ಗ್ಯಾಂಗ್ ಮೋಜು ಮಸ್ತಿ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ 15 ಜನರ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಂದಿದೆ.
ಮೆಡಿಕಲ್ ರಿಪೋರ್ಟ್ ನಲ್ಲಿ 15 ಜನರು ಗಾಂಜಾ ಮತ್ತು ಚರಸ್ ಸೇವಿಸಿರೋದು ದೃಢವಾಗಿದೆ. ಪಾರ್ಟಿಯಲ್ಲಿ ರೌಡಿಶೀಟರ್ ಮತ್ತು ಕುಟುಂಬದ ಸದಸ್ಯರು ಭಾಗಿಯಾಗಿದ್ದರು ಎನ್ನಲಾಗಿದೆ. ಮಹಿಳೆಯರನ್ನು ಮಹಿಳಾ ಸಿಬ್ಬಂದಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಎಲ್ಲಾ ಆರೋಪಿಗಳ ವಿಚಾರಣೆ ನಡೆಯುತ್ತಿದೆ.








