ಬೆಂಗಳೂರು : ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಸಿಎಂ ಮತ್ತು ಡಿಸಿಎಂ ಬಳಿಕ ಕಾಂಗ್ರೆಸ್ ನ ಕೆಲವು ಸಚಿವರು ಹಾಗೂ ಶಾಸಕರು ದಿಢೀರ್ ಎಂದು ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಇವರ ಒಂದು ನಡೆ ರಾಜ್ಯ ಕಾಂಗ್ರೆಸ್ ನಲ್ಲಿ ಕುತೂಹಲಕಾರಿ ಬೆಳವಣಿಗೆ ನಡೆದಿದೆ.
ಹೌದು ರಾಜ್ಯ ಕಾಂಗ್ರೆಸ್ಸಿನ ಕೆಲವು ಸಚಿವರು ಹಾಗೂ ಶಾಸಕರು ದಿಢೀರ್ ಎಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಚೆಲುವರಾಯಸ್ವಾಮಿ, ಇಕ್ಬಾಲ್ ಹುಸೇನ್, ಮಾಗಡಿ ಬಾಲಕೃಷ್ಣ ಹಾಗು ಗುಬ್ಬಿ ಶ್ರೀನಿವಾಸ್ ದೆಹಲಿಗೆ ಪ್ರಯಾಣ ಬೆಳೆಸಿದ್ದು ಕೆ ಸಿ ವೇಣುಗೋಪಾಲ್ ಅವರ ಬೇಟೆಗೆ ನಾಳೆ ಸಮಯ ನಿಗದಿಯಾಗಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್ ಬೇಟಿಗೆ ಸಚಿವರು ಮತ್ತು ಶಾಸಕರು ತೆರಳಿದ್ದಾರೆ.








