ಬೆಳಗಾವಿ : ದೇಶದ ಹಿರಿಯ ರಾಜಕಾರಣಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (95) ಭಾನುವಾರ ಸಂಜೆ ನಿಧನರಾದರು. ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಇವರ ನಿಧನಕ್ಕೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಶಾಮನೂರು ಶಿವಶಂಕರಪ್ಪ ಅಗಲಿಕೆ ತುಂಬಾ ನೀವು ತಂದಿದೆ.ಅವರನ್ನು ಯಾವಾಗಲು ಗೌರವಿಸುವೆ. ಸದನದಲ್ಲಿ ಸಂತಾಪ ಸೂಚನೆಗೆ ಅವಕಾಶ ನೀಡಲಾಗುತ್ತೆ. ಅಂತ್ಯಕ್ರಿಯೆಗೆ ಹೋಗುವ ಸದಸ್ಯರಿಗೆ ಅನುವು ಮಾಡಿಕೊಡುತ್ತೇವೆ. ನಾನು ಸಹ ಶಾಮನೂರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸುತ್ತೇನೆ ಎಂದು ಯುಟಿ ಖಾದರ್ ತಿಳಿಸಿದರು.








