ಬೆಂಗಳೂರು : ಇತ್ತೀಚಿಗೆ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ರಚಿತಾ ರಾಮ್ ಅವರ ನಟನೆಯ ಸಂಜು ವೆಡ್ಸ್ ಗೀತಾ-2 ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಒಂದು ಚಿತ್ರದ ಪ್ರಚಾರಕ್ಕೆ ನಟಿ ರಚಿತಾ ರಾಮ್ ಪ್ರಚಾರಕ್ಕೆ ಬರಲಿಲ್ಲ ಎಂದು ಇದೀಗ ಫಿಲಂ ಚೇಂಬರ್ಗೆ ನಟಿ ರಚಿತಾ ರಾಮ್ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಹೌದು ಚಿತ್ರದ ಪ್ರಚಾರಕ್ಕೆ ಬಾರದ ಹಿನ್ನೆಲೆಯಲ್ಲಿ ನಟಿ ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರಿಗೆ ದೂರು ನೀಡಲಾಗಿದೆ. ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿಯಿಂದ ಅದ್ದೂರಿ ಸಲ್ಲಿಕೆಯಾಗಿದೆ ನಾವು ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸಿನಿಮಾಕ್ಕೆ ಒಂಚೂರು ಸಹಕಾರ ಕೊಟ್ಟಿಲ್ಲ ಎಂದು ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಮನವೊಲಿಸಿದರೂ ಸಹ ಚಿತ್ರ ಪ್ರಚಾರಕ್ಕೆ ಅವರು ಒಪ್ಪಿಲ್ಲ. ನಟ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಅವರೆಲ್ಲರೂ ಸಹ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ. ಆದರೆ ನಟಿ ರಚಿತಾ ರಾಮ್ ಚಿತ್ರದ ಪ್ರಚಾರಕ್ಕೆ ಬಂದಿಲ್ಲ ನಾವು ರಚಿತಾ ರಾಮ್ ಗೆ ಪೇಮೆಂಟ್ ಏನು ಕಡಿಮೆ ಕೊಟ್ಟಿಲ್ಲ. ಆದರೂ ಅವರು ಚಿತ್ರದ ಪ್ರಚಾರಕ್ಕೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.