ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ.
6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ಭರತ್ ಹೆಗಡೆ ಟ್ರ್ಯಾಕ್ ಮಾಡಲಾಗಿದ್ದು, ದೂರುದಾರರಿಗೆ 60 ಲಕ್ಷ ಹಣ ಕಟ್ಟುವಂತೆ ಡಿಸಿ ಭರತ್ ಹೆಗಡೆ ನೋಟಿಸ್ ನೀಡಿದ್ದ.
ಹಣ ಕಡಿಮೆ ಮಾಡಬೇಕು ಅಥವಾ ಕಟ್ಟದ ಹಾಗೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹತ್ತು ಲಕ್ಷ ಹಣ ನೀಡುವಂತೆ ಭರತ್ ಹೆಗಡೆ ಬೇಡಿಕೆ ಇಟ್ಟಿದ್ದ ಲಾರಿ ಮತ್ತು ಪೆಟ್ರೋಲ್ ಬಂಕ್ ಮಾಲಿಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಂಗಡವಾಗಿ 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಭರತ್ ಹೆಗಡೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾನೆ.








