ನವದೆಹಲಿ : ಯುವ ಸಮುದಾಯ ರಾಜಕೀಯ ಕ್ಷೇತ್ರಕ್ಕೆ ಬರಬೇಕು ರಾಜಕಾರಣಕ್ಕೆ ಬರಲು ಮಹತ್ವಾಕಾಂಕ್ಷೆ ಅಲ್ಲ, ಒಂದು ವಿಷನ್ ಬೇಕು. ಉತ್ತಮ ವಿಷನ್ ನೊಂದಿಗೆ ರಾಜಕೀಯಕ್ಕೆ ಬನ್ನಿ ಎಂದು ಯುವ ಸಮುದಾಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ಕನ್ನಡಿಗ ಉದ್ಯಮಿ ನಿಖಿಲ್ ಕಾಮತ್ ಅವರು ನಡೆಸಿದ ಸಂದರ್ಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ರಾಜಕೀಯ ಕ್ಷೇತ್ರದ ಬಗ್ಗೆ ಪ್ರಧಾನಿ ಮೋದಿಗೆ ನಿಖಿಲ್ ಕಾಮತ್ ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಕ್ಷೇತ್ರಕ್ಕೆ ಹೋಗಬೇಡ ಕೆಟ್ಟದ್ದು ಎಂದು ಮನೆಯಲ್ಲಿ ಹೇಳಿದ್ದರು ಎಂದು ಕಾಮತ್ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿಗೆ ಪ್ರಶ್ನಿಸಿದಾಗ ಹಾಗಿದ್ದರೆ ನೀವು ನನ್ನ ಮುಂದೆ ಮಾತನಾಡುತ್ತಿರಲಿಲ್ಲ.ನಾವು ರಾಜಕೀಯ ಕ್ಷೇತ್ರದಲ್ಲಿ ಇದ್ದೇವೆ ಹಾಗೇನಾದರೂ ಆಗಿದೆಯೇ? ಎಂದು ನಿಖಿಲ್ ಕಾಮತ್ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.
ಯುವ ಸಮುದಾಯ ರಾಜಕೀಯ ಕ್ಷೇತ್ರಕ್ಕೆ ಬರಬೇಕು.ರಾಜಕಾರಣಕ್ಕೆ ಬರಲು ಮಹತ್ವಾಕಾಂಕ್ಷೆ ಅಲ್ಲ, ವಿಷನ್ ಬೇಕು. ಉತ್ತಮ ವಿಷನ್ ನೊಂದಿಗೆ ರಾಜಕೀಯಕ್ಕೆ ಬನ್ನಿ ಎಂದು ಕರೆ ನೀಡಿದ್ದಾರೆ. ಹಲವು ದೇಶಗಳ ನಡುವಿನ ಯುದ್ಧಗಳ ಬಗ್ಗೆಯೂ ಇದೆ ವೇಳೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.ಪರಸ್ಪರ ಶಾಂತಿ ಸಂಧಾನದ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ದೇಶ ಇರಲಿ ಯಾವುದೇ ದೇಶ ಇರಲಿ, ಶಾಂತಿಯ ಪರವಾಗಿ ನಾವು ನಿಲ್ಲುತ್ತೇವೆ ಎಂದು ನಿಖಿಲ್ ಕಾಮತ್ ನಡೆಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.