ಬೆಂಗಳೂರು : ನಾಳೆಯಿಂದ ಫೆಬ್ರವರಿ 14 ರವರೆಗೆ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಏರ್ ಶೋ ರಿಹರ್ಸಲ್ ಕೂಡ ನಡೆಯುತ್ತಿದೆ. ಇದೀಗ ರಿಹರ್ಸಲ್ ವೇಳೆ ಪೊಲೀಸರಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಹೌದು ಬೆಂಗಳೂರಿನ ಯಲಹಂಕ ಸಮೀಪ ಇಂದು ಏರ್ ಶೋ ರಿಹರ್ಸಲ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಏರ್ ಶೋ ಗೆ ಬಂದಂತಹ ಪೊಲೀಸ್ ಸಿಬ್ಬಂದಿಗಳಿಗೆ ಇನ್ಸ್ಪೆಕ್ಟರ್ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಠಾಣೆ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಊಟದ ವ್ಯವಸ್ಥೆ ಮಾಡಿಸಿದ್ದರು.
ಯಲಹಂಕ ಪೊಲೀಸ್ ಠಾಣೆಯಿಂದ ಸಿಬ್ಬಂದಿಗಳಿಗೆ ಊಟ ನೀಡಲಾಗಿತ್ತು. ಜಿರಳೆ ಕಂಡುಬಂದ ಹಿನ್ನೆಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳು ಊಟ ಬಿಟ್ಟಿದ್ದಾರೆ. ಒಂದು 200 ಊಟಕ್ಕೆ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಫೆಬ್ರವರಿ 4ರಂದು ಆದೇಶ ಪ್ರಕಟವಾಗಿದೆ ಆದೇಶವಾಗಿದ್ದು, ಕೆಲವೇ ದಿನಗಳಲ್ಲಿ ಗುಣಮಟ್ಟ ಮತ್ತು ಶುಚಿತ್ವ ಇಲ್ಲದ ಆಹಾರ ಪೂರೈಸಲಾಗಿದೆ ಎಂದು ಪೊಲೀಸ್ ಸಿಬ್ಬಂದಿಗಳು ನೋವು ತೋಡಿಕೊಂಡಿದ್ದಾರೆ.