ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಲಯದ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಸುರೇಶ್ ಗೆ ಸಮನ್ಸ್ ಜಾರಿ ಮಾಡಿದ್ದು, ಈ ಒಂದು ಸಮನ್ಸ್ ಪ್ರಶ್ನಿಸಿ, ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ನ್ಯಾ.ಎಂ.ನಾಗಪ್ರಸನ್ನ ಅವರು ಫೆಬ್ರವರಿ 20ರಂದು ವಿಚಾರಣೆ ನಿಗದಿಪಡಿಸಿದ್ದು 20ರವರೆಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಬೈರತಿ ಸುರೇಶ್ ಅವರ ED ಸಮನ್ಸ್ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದರು.
ವಿಚಾರಣೆ ಆರಂಭದಲ್ಲಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಪರವಾಗಿ ವಕೀಲ ಸಂದೇಶ್ ಚೌಟ ಅವರು ವಾದ ಆರಂಭಿಸಿದರು. ಈ ಪ್ರಕರಣದಲ್ಲಿ ಅಪರಾಧದಿಂದ ಗಳಿಸಿದ ಹಣವಿಲ್ಲ. ಅಕ್ರಮ ಹಣದ ಗಳಿಕೆ ಇದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ಪ್ರಕರಣದಲ್ಲಿ ಇಡಿ ಸರ್ಚ್ ಮತ್ತು ಸೀಜ್ ಮಾಡೋದನ್ನು ಸಹ ರದ್ದು ಪಡಿಸಿದೆ. ಇಡಿ ಕಾನೂನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶವನ್ನು ಮಂಡಿಸಿದರು.
ಇಡಿ ಸರ್ಚ್ ಮತ್ತು ಸೀಸ್ ನಲ್ಲಿ ಯಾವುದೇ ರೀತಿಯಾದ ದಾಖಲೆ ಸಿಕ್ಕಿಲ್ಲ. ಏನು ಸಿಗದೇ ಇಡಿ ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ಮೊಬೈಲ್ ಅನ್ನು ಸೀಜ್ ಮಾಡಿದ್ದರು. ಇಡಿ ಸಮನ್ಸ್ ನೀಡುವ ಮುನ್ನ ಹಲವು ಪ್ರಕ್ರಿಯೆ ಪಾಲಿಸಿಲ್ಲ. ಅಕ್ರಮ ಹಣ ವರ್ಗಾವಣೆ ತಡೆಯಲು PMLA ಕಾಯ್ದೆ ತರಲಾಗಿದೆ. ಮಾದಕ ದ್ರವ್ಯ ಸಾಗಾಟದಂತಹ ಹಣ ಆರ್ಥಿಕತೆಗೆ ಬರಬಾರದು ಹಾಗಾಗಿ PMLA ಕಾಯ್ದೆ ಜಾರಿಗೆ ತರಲಾಯಿತು. ಆದರೆ ಇಡೀ ಅದನ್ನು ಎಲ್ಲಾ ಕೇಸ್ಗು ಅನ್ವಯಿಸುತ್ತಿದೆ ಎಂದು ಸಂದೇಶ ಚೌಟ ವಾದ ಮಂಡಿಸಿದರು.
ಅಕ್ರಮ ಹಣ ವರ್ಗಾವಣೆ ಇಲ್ಲದಿರುವುದರಿಂದ ಇಡಿ ತನಿಖೆ ಸರಿಯಲ್ಲ. ಈಗಾಗಲೇ ತನಿಖೆ ನಡೆದಿರುವ ಬಗ್ಗೆ ಇಡೀ 2ನೇ ತನಿಖೆ ನಡೆಸುವಂತಿಲ್ಲ.ಅಕ್ರಮ ಹಣದ ಗಳಿಕೆ ಇದ್ದರೆ ಮಾತ್ರ ಈಡಿಗೆ ಅಧಿಕಾರವಿದೆ. ಆಗ ಮತ್ರ ಜಾರಿ ನಿರ್ದೇಶನಾಲಯ ಸರ್ಚ್ ಮತ್ತು ಸೀಜ್ ಮಾಡಬಹುದು. ಒಬ್ಬ ವ್ಯಕ್ತಿ 1 ಕೋಟಿ ಹಣ ವಂಚಿಸಿದ್ದಾನೆ ಎಂದುಕೊಳ್ಳೋಣ. ಆ ಹಣ ವಾಪಸ್ ಕೊಟ್ಟರೆ ವಂಚನೆ ಕೇಸ್ ಮುಕ್ತಾಯವಾಗುವುದಿಲ್ಲ. ಆದರೆ PML ಕಾಯ್ದೆಯ ಅಡಿ ಕೇಸ್ ಮುಕ್ತಾಯಗೊಳ್ಳುತ್ತದೆ. ಏಕೆಂದರೆ ಜಪ್ತಿ ಮಾಡಲು ಆ ಅಕ್ರಮ ಹಣ ಇರುವುದಿಲ್ಲ. ಎಂದು ಸಿಎಂ ಪತ್ನಿ ಪಾರ್ವತಿಪುರ ವಕೀಲ ಸಂದೇಶ ಚೌಟ ವಾದಿಸಿದರು.
ಆಕ್ಷೇಪಣೆ ಎಂದು ಸಲ್ಲಿಸುತ್ತೀರಿ ಎಂದು ಹೈಕೋರ್ಟ್ ಇಡಿ ಪರ ವಕೀಲರಿಗೆ ಪ್ರಶ್ನಿಸಿದೆ. ಈ ವೇಳೆ ಇನ್ನೆರಡು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ಹೇಳಿದ್ದು ಫೆಬ್ರವರಿ 14ರಂದು ವಾದ ಮಂಡನೆಗೆ ಸಿದ್ಧ ಇದ್ದೇವೆ ಎಂದು ಇಡಿ ಪ್ರವಚನರು ತಿಳಿಸಿದರು ಈ ವೇಳೆ ಹೈ ಕೋರ್ಟ್ ಫೆಬ್ರವರಿ 20ರಂದು ಈ ಒಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದ್ದು ಅಲ್ಲದೆ 20 ರವರೆಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ನೀಡಿದ ಇಡೀ ಸಮನ್ಸ್ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದರು.
ಭೈರತಿ ಸುರೇಶ್ ಪರ ಸಿವಿ ನಾಗೇಶ್ ವಾದ ಮಂಡನೆ
ED ನೀಡಿದ್ದ ಸಮನ್ಸ್ ರದ್ದು ಕೋರಿದ ಭೈರತಿ ಸುರೇಶ್ ಅರ್ಜಿ ವಿಚಾರಣೆ ಇದೀಗ ಧಾರವಾಡ ಹೈಕೋರ್ಟ್ ಪೀಠದಲ್ಲಿ ಆರಂಭವಾಗಿದೆ. ಸಚಿವ ಭೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸೀವಿ ನಾಗೇಶ್ ಅವರು ವಾದ ಮಂಡಿಸುತ್ತಿದ್ದು, ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ ಹೀಗಾಗಿ ಇಡಿ ಸಮನ್ಸ್ ಕಾನೂನು ಬಾಹಿರವಾಗಿದೆ. ಈ ವೇಳೆ ಭೈರತಿ ಸುರೇಶ್ ಯಾವ ಇಲಾಖೆ ಸಚಿವರು ಎಂದು ಈ ವೇಳೆ ಹೈಕೋರ್ಟ್ ಪ್ರಶ್ನಿಸಿದೆ. ಭೈರತಿ ಸುರೇಶ್ ನಗರಾಭಿವೃದ್ಧಿ ಇಲಾಖೆಯ ಸಚಿವರು ಎಂದು ವಕೀಲರು ಪ್ರಶ್ನೆಗೆ ಸಿವಿ ನಾಗೇಶ್ ಉತ್ತರಿಸಿದ್ದಾರೆ.
ಬಳಿಕ ಇಡಿ ಪರವಾಗಿ ಹೆಚ್ಚುವರಿ ಸೋಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದರು. ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯ ಪ್ರವೇಶಿಸಬಾರದು. ಈ ಬಗ್ಗೆ ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪು ಇದೆ ಎಂದು ಅವರು ವಾದಿಸಿದಾಗ, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ ಎಂದು ಇದೇ ವೇಳೆ ಸವಿ ನಾಗೇಶ್ ವಾದಿಸಿದರು.ಇಡಿ ತನಿಖಾಧಿಕಾರಿಗಳು ನಮೂನೆ ಒಂದನ್ನು ಕಳುಹಿಸಿದ್ದಾರೆ.ಇದರಲ್ಲಿ ಭೈರತಿ ಸುರೇಶ್ ಕುಟುಂಬದವರು ಮತ್ತು ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆಯಾಗಿದೆ.14 ಸೈಟ್ ಹಂಚಿಕೆಗೂ ಭೈರತಿ ಸುರೇಶ್ ಗು ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದರು.