ಚೈನ್ನೈ : ಮರು ವಿಂಗಡಣೆಯಿಂದ ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಸರ್ವಪಕ್ಷಗಳ ತುರ್ತು ಸಭೆ ಕರೆದಿದ್ದು, ಈ ಒಂದು ಸಭೆಗೆ ಬಿಜೆಪಿ ಗೈರಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಸ್ಟಾಲನ್ ನೇತೃತ್ವದಲ್ಲಿ ಇದೀಗ ಸರ್ವ ಪಕ್ಷ ಸಭೆ ನಡೆಯುತ್ತಿದ್ದು, ಚೆನ್ನೈನಲ್ಲಿ ಸರ್ವಪಕ್ಷಗಳ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸ್ಟಾಲಿನ್ ತಮಿಳುನಾಡಿನ ಸರ್ವಪಕ್ಷಗಳ ಸಭೆಗೆ ಬಿಜೆಪಿ ಗೈರಾಗಿದೆ. ಸರ್ವಪಕ್ಷಗಳ ಸಭೆಯಲ್ಲಿ ನಟ ಕಮಲ್ ಹಾಸನ್ ಭಾಗವಹಿಸಿದ್ದಾರೆ. ಕ್ಷೇತ್ರಮರು ವಿಂಗಡಣೆಯಲ್ಲಿ 8 ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಸರ್ವ ಪಕ್ಷಗಳ ಸಭೆಗೆ ಆಹ್ವಾನಿಸಿದ್ದಾರೆ.