ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.
ಶಿರೂರು ಬಳಿ ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಅಧಿಕಾರಿಗಳಿಂದ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು. ಈಗಾಗಲೇ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿರುವವರನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದು ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು ರಕ್ಷಣಾ ಕಾರ್ಯಚರಣೆಯನ್ನು ಸಿದ್ದರಾಮಯ್ಯನವರು ವೀಕ್ಷಿಸುತ್ತಿದ್ದು ಅವರ ಜೊತೆಗೆ ಸಚಿವರಾದ ಕೃಷ್ಣ ಭೈರೇಗೌಡ, ಆರ್.ವಿ ದೇಶಪಾಂಡೆ, ಶಾಸಕ ಮಂಕಾಳು ವೈದ್ಯ ಸಾತ್ ನೀಡಿದ್ದಾರೆ.
ಸ್ಥಳಕ್ಕೆ ಈಗಾಗಲೇ ಹಲವು ಸಚಿವರು, ಶಾಸಕರುಗಳು ಭೇಟಿ ನೀಡಿದ್ದು, ಮಣ್ಣು ತೆರುವು ಕಾರ್ಯಾಚರಣೆ ಹಾಗೂ ಮಣ್ಣಿನಲ್ಲಿ ಸಿಲುಕಿರುವ ಇನ್ನೂ ಹಲವರ ಮೃತದೇಹಗಳನ್ನು ಹೊರ ತೆಗೆಯುವ ಕುರಿತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಒಂದು ಕಾಯಾಚರಣೆ ನಡೆಯುವ ಸಂದರ್ಭದಲ್ಲಿ ಇದೀಗ ಜೋರಾಗಿ ಮಳೆ ಆಗುತ್ತಿದ್ದು ಕಾರ್ಯಾಚರಣೆ ವಿಳಂಬಕ್ಕೆ ಇದು ಕೂಡ ಒಂದು ಕಾರಣವಾಗಿದೆ ಎಂದು ಹೇಳಬಹುದು. ಈಗಾಗಲೇ ಬೆಳಗಾವಿಯಿಂದ ಮಿಲಿಟರಿ ಪಡೆ ಕೂಡ ಕಾರ್ಯಾಚರಣೆ ನಡೆಸಲು ಆಗಮಿಸಿದೆ ಎಂದು ತಿಳಿದುಬಂದಿದೆ.