ಬೆಳಗಾವಿ : ಇಂದು ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅನಾರೋಗ್ಯದಿಂದ ವಿಶ್ರಾಂತಿ ಪಡೆಯಲು ಸರ್ಕ್ಯೂಟ್ ಹೌಸ್ ಗೆ ತೆರಳಿದರು. ಈ ವೇಳೆ ಹಲವು ಸಚಿವರು ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಸರ್ಕ್ಯೂಟ್ ಹೌಸ್ ಗೆ ಭೇಟಿ ನೀಡಿದ್ದರು.
ಇದೀಗ ಸಿಎಂ ಸಿದ್ದರಾಮಯ್ಯ ಆರೋಗ್ಯದ ಕುರಿತು ಪುತ್ರ ಯತೀಂದ್ರ ಅವರು ತಂದೆಯವರ ಆರೋಗ್ಯ ಚೆನ್ನಾಗಿದೆ ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ. ಗ್ಯಾಸ್ಟ್ರೊಕೇಶನ್ ಇನ್ಫೆಕ್ಷನ್ ಆಗಿದೆ ಡೇರಿಯ ಸಮಸ್ಯೆ ತರ ಆಗಿದೆ. ತಂದೆಯವರು ವಿಶ್ರಾಂತಿ ಪಡೆಯುತ್ತಿದ್ದಾರೆ ನಾಳೆ ಅಧಿವೇಶನಕ್ಕೆ ಬರುತ್ತಾರೆ ಸಿಎಂ ಗೆ ಅನಾರೋಗ್ಯ ಹಿನ್ನಲೆ ಯತೀಂದ್ರ ಅವರು ಕೂಡ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿದ್ದರು.








