ನವದೆಹಲಿ : ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವೇಳೆ ಬಾಲಿವುಡ್ನ ಸಂವೇದನಾಶೀಲ ನಟ, ನಿರ್ದೇಶಕ ಅಮಿರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು.
ಸಿನೆಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು ಆಪ್ತವಾಗಿಸಿದೆ.ಅವರ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹಾರೈಸಿ, ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದೆ.
ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವೇಳೆ ಬಾಲಿವುಡ್ನ ಸಂವೇದನಾಶೀಲ ನಟ, ನಿರ್ದೇಶಕ ಅಮಿರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು.
ಸಿನೆಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು… pic.twitter.com/KWef5Bpyp3— Siddaramaiah (@siddaramaiah) June 24, 2025