ಬೆಂಗಳೂರು : ಬಿಜೆಪಿಯವರು ಮೋಸ್ಟ್ ಕರಪ್ಟ್ ಪೀಪಲ್ಸ್ ಆನ್ ಅರ್ಥ್ ಎಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಬೆಳೆದಿದ್ದರೆ ಅದಕ್ಕೆ ಬಿಜೆಪಿ ಮತ್ತು RSS ಕಾರಣ ಎಂದು ಗಂಭಿರವಾಗಿ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೋಸ್ಟ ಕರಪ್ಟ್ ಪೀಪಲ್ ಆನ್ ಅರ್ಥ್. ಯಾರಾದರೂ ಬಹಳ ಭ್ರಷ್ಟರು ಇದ್ದರೆ ಅದು ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ. ಇವತ್ತು ರಾಜ್ಯದಲ್ಲಿ ಇಷ್ಟೊಂದು ಮಟ್ಟದಲ್ಲಿ ಭ್ರಷ್ಟಾಚಾರ ಬೆಳೆಯುವುದಕ್ಕೆ ಬಿಜೆಪಿ ಆರ್ ಎಸ್ ಎಸ್ ಕಾರಣ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಷ್ಟು ಕಾಲ ಭ್ರಷ್ಟಾಚಾರ ಬೆಳೆದಿಲ್ಲ. ಬಿಜೆಪಿಯವರು ಬಂಡವಾಳ ಶಾಹಿಗಳು ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರ ಬೆಳೆಯಿತು. ಬಿಜೆಪಿಯವರು ಮೋಸ್ಟ್ ಕರೆಕ್ಟ್ ಪೀಪಲ್ಸ್ ಒನ್ ಅರ್ಥ್ ಎಂದು ತೀವ್ರ ವಾಗ್ದಾಳಿ ನಡೆಸಿದರು.