ಬೆಳಗಾವಿ : ನಮ್ಮ ತಂದೆ ಸದ್ಯ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ಒಂದು ಹೇಳಿಕೆ ನೀಡಿದ್ದು, ಪ್ರಗತಿಪರ ಸಿದ್ಧಾಂತ ಇರುವ ನಾಯಕರು ರಾಜ್ಯಕ್ಕೆ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಲು ಬೇಕು ಸತೀಶ್ ಜಾರಕಿಹೊಳಿ, ಆ ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಪರೋಕ್ಷವಾಗಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಹೇಳಿಕೆ ನೀಡಿದ್ದಾರೆ.
ಹೌದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ನಮ್ಮ ತಂದೆ ರಾಜಕೀಯ ಕೊನೆಕಾಲದಲ್ಲಿ ಇದ್ದಾರೆ ಹಾಗಾಗಿ ಮಾರ್ಗದರ್ಶನ ಮಾಡಿ ಪ್ರಗತಿಪರ ಸಿದ್ಧಾಂತ ಇರುವ ನಾಯಕರು ಬೇಕು. ಸಚಿವ ಸತೀಶ್ ಜಾರಕಿಹೊಳಿ ಆ ಒಂದು ಜವಾಬ್ದಾರಿ ನಿಭಾಯಿಸುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಒಂದು ಹೇಳಿಕೆಯ ಮೂಲಕ ನವೆಂಬರ್ ಕ್ರಾಂತಿ ಸುಳಿವು ಕೊಟ್ರ? ಅಂತ ಗುಸು ಗುಸು ಶುರುವಾಗಿದೆ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಅಂತ ಹೇಳಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಇದೀಗ ಯತೀಂದ್ರ ಅವರು ಹೇಳಿಕೆ ಸಂಚಲನ ಎಬ್ಬಿಸಿದೆ. ನವೆಂಬರ್ ಕ್ರಾಂತಿ ಸುಳಿವು ಕೊಟ್ರ? ಎನ್ನುವ ಚರ್ಚೆ ಹುಟ್ಟು ಹಾಕಿದೆ ನವೆಂಬರ್ ನಲ್ಲಿ ರಾ