ಬೆಳಗಾವಿ : ರಾಜ್ಯ ಕಾಂಗ್ರೆಸ್ ನಲ್ಲಿ ಜಗಳ ಗಂಭೀರವಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಯಾವಾಗ ಬೇಕಾದ್ರೂ ರಾಜೀನಾಮೆ ನೀಡಬಹುದು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಅವರು ಬೆಳಗ್ಗೆಯಿಂದ ಸಂಜೆವರೆಗೆ ಡಿನ್ನರ್ ಪಾರ್ಟಿ ನಡೆದಿದೆ. ಕಾಂಗ್ರೆಸ್ ನಲ್ಲಿ ಒಳ ಜಗಳ ಗಂಭೀರವಾಗಿದೆ. ಮುಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರಾಗಿದ್ದಾರೆ. ಅವರು ಯಾವಾಗ ಬೇಕಾದ್ರೂ ರಾಜೀನಾಮೆ ನೀಡಬಹುದು ಎಂದು ಹೇಳಿದ್ದಾರೆ.
ಖರ್ಗೆ ಅವರು ಕಾಂಗ್ರೆಸ್ ನಾಯಕರಿಗೆ ವಾರ್ನಿಂಗ್ ಮಾಡಿದ್ದಾರೆ. ಸುಮ್ಮನಿರ್ತಿರೋ ಇಲ್ಲಾ ಅನ್ನೋ ಮಟ್ಟಿಗೆ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಜಗಳ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಯಾವಾಗ ಬೇಕಾದ್ರೂ ರಾಜೀನಾಮೆ ನೀಡಬಹುದು ಎಂದು ತಿಳಿಸಿದ್ದಾರೆ.