ಕೊಪ್ಪಳ : ಕೊಪ್ಪಳದ ಸಮೀಪದಲ್ಲಿ 1 ಸಾವಿರ ಎಕರೆ ಭೂಮಿಯಲ್ಲಿ ಬಲ್ದೋಟ ಕಂಪನಿ ಕಬ್ಬಿಣ ಉತ್ಪಾದನೆ ಕಾರ್ಖಾನೆ ವಿಸ್ತರಣೆಗೆ ಮುಂದಾಗಿದ್ದು, ಈ ಕುರಿತು ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಬಲ್ಡೋಟ ಕಾರ್ಖಾನೆಗೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದಾರೆ. ಕೆಲಸ ನಿಲ್ಲಿಸುವಂತೆ ಕೊಪ್ಪಳದ ಜಿಲ್ಲಾಧಿಕಾರಿಗೆ ಇದೀಗ ಸೂಚನೆ ನೀಡಿದ್ದಾರೆ.
ಹೌದು ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಹೋರಾಟಗಾರರ ನಿಯೋಗ ಭೇಟಿಯಾಗಿತ್ತು. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ಮಾಡಿದ್ದರು. ನಿಯೋಗದ ಮನವಿಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಕಾರ್ಖಾನೆ ಕೆಲಸ ನಿಲ್ಲಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಲ್ಡೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಉಕ್ಕಿನ ಕಾರ್ಖಾನೆ ವಿಸ್ತರಣೆಗೆ ಜಿಲ್ಲಾಡಳಿತ ಆರಂಭಿಸುವುದಕ್ಕೆ ಮುಂದಾಗಿತ್ತು.ಆದರೆ ಕೊಪ್ಪಳ ಜನತೆ ಇದೀಗ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಇದೀಗ ಕ್ಷಮಿಸಿದ್ದರಾಮಯ್ಯ ಅವರು ಈ ಒಂದು ಕಾರ್ಖಾನೆಗೆ ಬ್ರೇಕ್ ಹಾಕಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.