ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜು, ವಿದ್ಯಾರ್ಥಿಗಳ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ವಿದ್ಯಾರ್ಥಿಗಳನ್ನು ಇದೀಗ ಮಡಿವಾಳ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದಿತ್ಯ ಭೋಸ್ಲೆ, ಶೌರ್ಯ ಅಗರ್ವಾಲ್, ನಿಕ್ಕು ಸುಲ್ತಾನಿಯ ಹಾಗು ಸಯ್ಯದ್ ಮೊಹಮ್ಮದ್ ಬಿಲಾಲ್ ಬಂಧಿತ ಆರೋಪಿಗಳು.
ನಾಲ್ವರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹಣಕ್ಕಾಗಿ ಸಹಪಾಠಿಯನ್ನು ಕಿಡ್ನಾಪ್ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೊಯ್ಸಳ ಪೊಲೀಸರಿಗೆ ಕಿಡ್ನಾಪ್ ಆಗಿದ್ದ ಸ್ನೇಹಿತ ಕರೆ ಮಾಡಿದ್ದ ಸದ್ಯ ಪ್ರಕರಣದ ತನಿಖೆಯನ್ನು ಮಡಿವಾಳ ಠಾಣೆ ಪೊಲೀಸರು ಮುಂದುವರಿಸಿದ್ದಾರೆ.








