ಕಲಬುರ್ಗಿ : ಬೀದರ್ ನಲ್ಲಿ ರೈಗೆ ತಲೆಕೊಟ್ಟು ಯುವ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜು ಕಪನೂರು ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಹೌದು ಆರೋಪಿ ರಾಜು ಕಪನೂರು ಮನೆಯ ಮೇಲೆ ಸಿಐಡಿ ದಾಳಿ ಮಾಡಿದೆ. ಇದೆ ವೇಳೆ ರಾಜು ಕಪನೂರ್ ಸೇರಿ ನಾಲ್ವರು ಆರೋಪಿಗಳ ಮೇಲೆ ಮನೆಯ ಮೇಲೆ ಸಿಐಡಿ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಬಂಧಿತ ಎಲ್ಲಾ ಆರೋಪಿಗಳನ್ನು 14 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಕಲಬುರ್ಗಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಾಜು ಕಪನೂರ್ ನಿವಾಸದ ಮೇಲೆ ದಾಳಿ ಮಾಡಿದ್ದು ಅವರಲ್ಲದೆ ಉಳಿದ ಆರೋಪಿಗಳಾದ ಗೊರಖ್ ನಾಥ್, ರಾಮನಗೌಡ, ನಂದಕುಮಾರ್ ನಾಲ್ವರು ಆರೋಪಗಳ ಮನೆಯಲ್ಲಿ ಸಿಐಡಿ ಇದೀಗ ಶೋಧ ಕಾರ್ಯ ನಡೆಸಿದ್ದಾರೆ ಇಬ್ಬರು ಡಿವೈಎಸ್ಪಿ ಇನ್ಸ್ಪೆಕ್ಟರ್ 40 ಸಿಬ್ಬಂದಿಗಳಿಂದ ಇದೀಗ ತನಿಖೆ ಚುರುಕು ಗೊಳಿಸಿದ್ದಾರೆ.