ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ದುರ್ಗ ತಾಲೂಕಿನ ಕಾನೆಹಳ್ಳದಲ್ಲಿ ನಡೆದಿದೆ.
ಹೌದು ಕಾನೆಹಳ್ಳದಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿದ್ದಾರೆ. ಅತ್ತಿಮಗೆ ಗ್ರಾಮದ ತಿಮ್ಮಯ್ಯ (35) ಮತ್ತು ಪುಟ್ಟಮ್ಮ (32) ನೀರು ಪಾಲಾಗಿದ್ದಾರೆ. ಪತ್ನಿ ಪುಟ್ಟಮ್ಮಳ ಶವ ಪತ್ತೆಯಾಗಿದ್ದು, ಪತಿ ತಿಮ್ಮಯ್ಯ ಶವಕ್ಕಾಗಿ ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.