ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯ ಬಂಧನ ವಿಚಾರವಾಗಿ ಇದೀಗ ಚಿನ್ನಯ್ಯ ಪ್ರಕರಣದ ಯಾವುದೇ ಮಾಹಿತಿ ನೀಡದಂತೆ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.ವಿಚಾರಣ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡದಿಂದ ಅರ್ಜಿ ಸಲ್ಲಿಸಲಾಗಿದೆ. FIR, ಪ್ರಕರಣ ಸೇರ್ಪಡೆ ಇತರೆ ಮಾಹಿತಿ ಗೌಪ್ಯವಾಗಿಸಲು SIT ಮನವಿ ಮಾಡಿದೆ. 39/2025 ಪ್ರಕರಣ ಗೌಪ್ಯವಾಗಿರಿಸಲು SIT ಅರ್ಜಿ ಸಲ್ಲಿಸಿದೆ.
ಇನ್ನೊಂದು ಕಡೆ ಅನನ್ಯ ಭಟ್ ಧರ್ಮಸ್ಥಳಕ್ಕೆ ತೆರಳಿದ್ದಾಗ ನಾಪತ್ತೆ ದೂರು ವಿಚಾರವಾಗಿ ಇದೀಗ ದೂರುದಾರೆ ಸುಜಾತಾ ಭಟ್ ಅವರನ್ನು SIT ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆ ಎದುರಿಸುತ್ತಿದ್ದಾರೆ. ಅನನ್ಯ ಭಟ್ ನನ್ನ ಮಗಳೆಂದು ಬಿಂಬಿಸಿದ್ದ ಸುಜಾತಾ ಭಟ್ ಸುಳ್ಳು ದೂರು ನೀಡಿ ಪೊಲೀಸರ ದಿಕ್ಕು ತಪ್ಪಿಸಿದ ಹಿನ್ನೆಲೆಯಲ್ಲಿ, ಸುಳ್ಳು ದೂರು ಸುಳ್ಳು ಸಾಕ್ಷಿ ಸೃಷ್ಟಿಸಿದ ಆರೋಪದ ಮೇಲೆ SIT ಪೋಲಿಸರು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.