ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಚೆನ್ನಯ್ಯನನ್ನು ಅರೆಸ್ಟ್ ಮಾಡಿ ತೀವ್ರ ತನಿಖೆ ನಡೆಸಿದ್ದಾರೆ ಅಲ್ಲದೆ ಇಂದು ಮಹೇಶ ಶೆಟ್ಟಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆ ಮಾಡಿದ್ದು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಚಿನ್ನಯ ಇದು ಹೆಣ್ಣುಮಗಳ ತಲೆ ಬುರುಡೆ ಎಂದು ತಂದುಕೊಟ್ಟಿದ್ದ. ಇದೀಗ ಎಫ್ಎಸ್ಎಲ್ ವರದಿಯಲ್ಲಿ ಇದು ಪುರುಷರ ತಲೆ ಬುರುಡೆ ಎಂದು ಬೆಳಕಿಗೆ ಬಂದಿದೆ.
ಹೌದು ಚಿನ್ನಯ್ಯ ತಂದ ಬುರುಡೆಯ ಎಫ್ ಎಸ್ ಎಲ್ ವರದಿ ಅಂಶ ಬಯಲಾಗಿದ್ದು FSL ಪರೀಕ್ಷೆಯಲ್ಲಿ ಸ್ಪೋಟಕವಾದ ಮಾಹಿತಿ ಬಯಲಾಗಿದೆ. ಅತ್ಯಾಚಾರ ಮಾಡಿ ಹೂತು ಹಾಕಿದ್ದೇನೆ ಅಂತ ಹೇಳಿದ್ದ ಅದು ಹೆಣ್ಣು ಮಗಳ ತಲೆ ಬುರುಡೆ ಅಂತ ಚಿನ್ನಯ ಹೇಳಿದ್ದ ಆದರೆ ಅದು ಪುರುಷನ ತಲೆ ಬುರುಡೆ ಎಂದು ತಿಳಿದುಬಂದಿದೆ. 25ರಿಂದ 30 ವರ್ಷದ ವ್ಯಕ್ತಿಯ ತಲೆ ಬುರುಡೆ ಎಂದು ವರದಿಯಲ್ಲಿ ತಿಳಿದು ಬಂದಿದೆ.