ಉತ್ತರಪ್ರದೇಶ : ಪರೀಕ್ಷೆ ಬರೆಯುವ ವೇಳೆ ನಿದ್ರೆ ಬಾರದಿರಲಿ ಎಂದು ಮಕ್ಕಳು ಉಗ್ರ ಮಾತ್ರೆಗಳನ್ನು ನುಂಗುವಂತಹ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವೈದ್ಯರು ಆತಂಕ ವ್ಯಕ್ತಪಡಿಸಿದ್ದು ಇಂತಹ ಮಾತ್ರೆಗಳ ಬಳಕೆ ತಡೆಗೆ ಅಗತ್ಯ ಕ್ರಮ ಹಾಗೂ ಮಾರಾಟ ಮಾಡೋ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
‘ಗ್ಯಾರಂಟಿ’ ಘೋಷಿಸಿದಾಗ ರಾಜ್ಯ ದಿವಾಳಿಯಾಗುತ್ತೆಂದು ಹೇಳಿದ್ರು, ಈಗ ಕರ್ನಾಟಕ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ
ಉತ್ತರ ಪ್ರದೇಶದ 10ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ ಇತ್ತೀಚೆಗೆ ಏಕಾಏಕಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಳು.ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳೆಲ್ಲಾ ಊದಿಕೊಂಡಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಶಸ್ತ್ರ ಚಿಕಿತೆ ನಡೆಸಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಇದೀಗ ವಿದ್ಯಾರ್ಥಿನಿ ಆಸ್ಪತ್ರೆ ದಾಖಲಾದ ವೇಳೆ ಆಕೆಯ ಪೋಷಕರು ಮನೆಯಲ್ಲಿನ ಆಕೆಯ ಕೋಣೆ ತಪಾಸಣೆ ಮಾಡಿದಾಗ ಅಲ್ಲಿ ಒಂದು ಬಾಟಲ್‌ನಲ್ಲಿ ಮಾತ್ರೆ ಕಂಡಿದೆ.
ಅಂಡಮಾನ್ ಅರಣ್ಯದೊಳಗೆ ಹಸಿವಿನಿಂದ ಸತ್ತ ಆರು ಕಳ್ಳ ‘ಮ್ಯಾನ್ಮಾರ್ ಬೇಟೆಗಾರರ’ ದೇಹಗಳು ಪತ್ತೆ
ಅದನ್ನು ವೈದ್ಯರಿಗೆ ತೋರಿಸಿದಾಗ ಅದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂಬುದು ಕಂಡುಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಪರೀಕ್ಷೆ ವೇಳೆ ರಾತ್ರಿಯಿಡೀ ಎಚ್ಚರದಿಂದಿರಲು ಈ ಮಾತ್ರೆ ಸೇವಿಸುತ್ತಿದ್ದೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ. ಇದು ಪೋಷಕರು ಮತ್ತು ವೈದ್ಯರು ಇಬ್ಬರನ್ನೂ ಕಳವಳಕ್ಕೆ ಗುರಿ ಮಾಡಿದೆ.
ಏನಿದು ನಿದ್ರೆ ತಡೆವ ಮಾತ್ರೆ?:
ದೇಹದಲ್ಲಿ ಚೈತನ್ಯ ಮೂಡಿಸುವ, ಜ್ಞಾಪಕ ಶಕ್ತಿ, ಅರಿವಿನ ಶಕ್ತಿ ಹೆಚ್ಚಿಸುತ್ತದೆ ಎಂದು ವಾದಿಸಲಾಗುವ ಮೊಡಾಫಿನಿಲ್ ರಾಸಾಯನಿಕದ ಮತ್ತೊಂದು ಸಂಯೋಜನೆಯನ್ನು ಹೊಂದಿರುವ ಮಾತ್ರೆ ಇದಾಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ನಿದ್ರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಕಾರ್ಯಾಚರಣೆ ಕೈಗೊಳ್ಳುವ ಉಗ್ರರು ನಿದ್ರೆ ಬಾಧಿಸದಿರಲಿ ఎంబ ಕಾರಣಕ್ಕೆ ಈ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಸಂಯೋಜನೆ ಹೊಂದಿರುವ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರದಿದ್ದರೂ ಸಹ ಕಳ್ಳ ಮಾರ್ಗದಲ್ಲಿ, ಬೇರೆ ಬೇರೆ ಹೆಸರಲ್ಲಿ ಈ ಮಾತ್ರೆಗಳನ್ನು ಭಾರತಕ್ಕೆ ಸಾಗಿಸಲಾಗುತ್ತದೆ. ಇದೇ ಮಾತ್ರೆಗಳನ್ನು ವಿದ್ಯಾರ್ಥಿಗಳು ಕೂಡಾ ಸೇವಿಸುತ್ತಿದ್ದಾರೆ ಎಂಬುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಅಲ್ಪಸಂಖ್ಯಾತ ಸಮುದಾಯದವರಿಗೆ ಗುಡ್‌ನ್ಯೂಸ್: 1ಲಕ್ಷ ರೂ.ವರೆಗೆ ʻಸ್ವಯಂ ಉದ್ಯೋಗʼಕ್ಕೆ ಅರ್ಜಿ ಆಹ್ವಾನ!