ಚಿಕ್ಕಮಗಳೂರು : ತನ್ನ ಪತಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದೂ, ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ಆತನಿಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ಎನ್ನುವ ಅಧಿಕಾರಿಯ ಪತ್ನಿ ಇದೀಗ ದೂರು ನೀಡಿದ್ದಾರೆ.
ಹೌದು ಪಿಎಸ್ಐ ನಿಂದ ಪತ್ನಿಯ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಳಸ ಠಾಣೆಯ ಪಿಎಸ್ಐ ನಿತ್ಯಾನಂದ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಪಿಎಸ್ಐ ನಿತ್ಯಾನಂದ ಪತ್ನಿ ಅಮಿತಾ ದೂರು ಆಧರಿಸಿ ಇದೀಗ FIR ದಾಖಲಾಗಿದೆ. ಕಳಸ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಹಲ್ಲೆ ಮಾಡಿದ್ದಾನೆ ಎಂದು ಪಿಎಸ್ಐ ನಿಂದ ಮಾನಸಿಕ ಹಿಂಸೆ ನೀಡುತ್ತಾನೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಬೇರೆ ಮಹಿಳೆಯೊಂದಿಗೆ ಆತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪಿ ಎಸ್ ಐ ವಿರುದ್ಧ ಪತ್ನಿ ಅಮಿತಾ ದೂರು ನೀಡಿದ್ದಾರೆ.ಪಿಎಸ್ಐ ನಿತ್ಯಾನಂದ ಸೇರಿ ಮುವರ ವಿರುದ್ಧ ಪತ್ನಿಮಿತ ಇದೀಗ ದೂರು ನೀಡಿದ್ದಾರೆ BNS 115(2) 351(1) ಹಾಗೂ 49ರ ಅಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.