ಬೆಂಗಳೂರು : ಬೀದರ್ ನಲ್ಲಿ ನಿಗೂಢ ಸ್ಫೋಟ ಬೆನ್ನಲ್ಲೇ, ಬೆಂಗಳೂರಿನ ಉರ್ದು ಶಾಲೆಯಲ್ಲಿ ಕೆಮಿಕಲ್ ಸ್ಫೋಟಗೊಂಡು ಓರ್ವ ವಿದ್ಯಾರ್ಥಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಘಟನೆ ಸಂಭವಿಸಿದೆ.
ಜಗ್ ನ ನೀರಿಗೆ ಕೆಮಿಕಲ್ ಹಾಕಿದಾಗ ಏಕಾಏಕಿ ಸ್ಪೋಟಗೊಂಡಿದೆ. ಕೆಮಿಕಲ್ ಸ್ಫೋಟದಿಂದ 7ನೇ ತರಗತಿ ವಿದ್ಯಾರ್ಥಿಗೆ ಗಂಭೀರವಾದ ಗಾಯಗಳಾಗಿವೆ. ಕಾರ್ಬನ್ ಕೆಮಿಕಲ್ ತಂದು 7ನೇ ತರಗತಿ ವಿದ್ಯಾರ್ಥಿ ಪ್ರಯೋಗ ಮಾಡುತ್ತಿದ್ದ ಗಾಯಗೊಂಡ ವಿದ್ಯಾರ್ಥಿ ದೇವನಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.








