ಚಾಮರಾಜನಗರ : ಕೌಟುಂಬಿಕ ಕಲಹದಿಂದ ಅಣ್ಣನಿಂದಲೇ ತಂಗಿಯ ಹತ್ಯೆಯಾಗಿದೆ. ಚಾಕುವಿನಿಂದ ಕುತ್ತಿಗೆ ಕೊಯ್ದು ಭೀಕರವಾಗಿ ಅಣ್ಣ ಎನ್ನುವ ನರಹಂತಕ ತಂಗಿಯನ್ನು ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗ ಮೊಹಲ್ಲಾದಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಐಮನ್ ಬಾನು ಎಂದು ತಿಳಿದುಬಂದಿದ್ದು, ಇನ್ನು ಹಂತಕ ಅಣ್ಣ ಫರ್ಮನ್ ಪಾಷಾ ಎಂದು ತಿಳಿದುಬಂದಿದೆ. ಅಲ್ಲದೇ ಆರೋಪಿ ತಂದೆ ಸೈಯದ್ ಪಾಷಾ ಹಾಗೂ ಅತ್ತಿಗೆ ತಸ್ಲೀಮ್ ಮೇಲೂ ಹಲ್ಲೆ ಮಾಡಿದ್ದಾನೆ.ಚಾಕು ಇರಿತದಿಂದ ಗಂಭೀರವಾಗಿ ತಂದೆ ಹಾಗೂ ಅತ್ತಿಗೆ ಗಾಯಗೊಂಡಿದ್ದಾರೆ.
ಸದ್ಯ ಇಬ್ಬರೂ ಗಾಯಾಳುಗಳನ್ನು ಚಾಮರಾಜನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತಂತೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.