ಬೆಂಗಳೂರು : ಸಿಇಟಿ-2025ಕ್ಕೆ ನೊಂದಣಿ ಹಾಗು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿ ಕರ್ನಾಟ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ.
ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲಾಗುವ ಸಿಇಟಿ-2025ಕ್ಕೆ ಇಲ್ಲಿಯವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು 24-02-2025 ರ ರಾತ್ರಿ 11.59 ರವರೆಗೆ ಹಾಗು 25-02-2025 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ.
ವಿಶೇಷ ಸೂಚನೆ: “ಈಗಾಗಲೇ ಅರ್ಜಿ ಸಲ್ಲಿಸಿರುವವರು ಎಲ್ಲಾ ಮಾಹಿತಿ ಸರಿಯಾಗಿ ತುಂಬಿರುವ ಬಗ್ಗೆ ಪರಿಶೀಲಿಸಿಕೊಳ್ಳಿ, ತಪ್ಪಿದ್ದರೆ ಮತ್ತೊಮ್ಮೆ Login ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಂತಿಮವಾಗಿ Submit ಮಾಡುವ ಅರ್ಜಿ ಸರ್ವರ್ನನಲ್ಲಿ Save ಆಗುತ್ತದೆ”.