ನವದೆಹಲಿ : ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ನ ಎಕ್ಸ್ ಖಾತೆ ನಿಷೇಧದ ಬೆನ್ನಲ್ಲೇ, ಟರ್ಕಿಶ್ ಪ್ರಸಾರಕ ‘ಟಿಆರ್‌ಟಿ ವರ್ಲ್ಡ್’ ನ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಹೌದು, ಟರ್ಕಿಶ್ ಪ್ರಸಾರಕ ‘ಟಿಆರ್‌ಟಿ ವರ್ಲ್ಡ್’ ನ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಚೀನಾದ ಪ್ರಚಾರ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ನ ‘X’ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
The 'X' account of Turkish broadcaster 'TRT World' withheld in India. pic.twitter.com/in72SVkubD
— ANI (@ANI) May 14, 2025
ಕೇಂದ್ರ ಸರ್ಕಾರವು ಕಳೆದ ವಾರ ಸಾಮಾಜಿಕ ಮಾಧ್ಯಮ ವೇದಿಕೆ X, ಸರ್ಕಾರದ ಕಾರ್ಯನಿರ್ವಾಹಕ ಆದೇಶಗಳನ್ನು ಅನುಸರಿಸಿ ಭಾರತದಲ್ಲಿ 8,000 ಖಾತೆಗಳನ್ನು ನಿರ್ಬಂಧಿಸಲು ಪ್ರಾರಂಭಿಸಿದೆ.