ನವದೆಹಲಿ : ಬಿಬಿಸಿ ನ್ಯೂಸ್ ನಲ್ಲಿ ಉಗ್ರರ ದಾಳಿ ಬಗ್ಗೆ ತಪ್ಪು ಮಾಹಿತಿ ಪ್ರಸಾರದ ಹಿನ್ನೆಲೆಯಲ್ಲಿ ಬಿಬಿಸಿ ನ್ಯೂಸ್ ವಿರುದ್ಧ ಕೇಂದ್ರ ಸರ್ಕಾರ ಆಕ್ರೋಶ ಹೊರಹಾಕಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಿಬಿಸಿ ವರದಿಗೆ ಭಾರತ ಸರ್ಕಾರ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಮಾರಕ ಕಾಶ್ಮೀರ ದಾಳಿಯ ನಂತರ ಪಾಕಿಸ್ತಾನ ಭಾರತೀಯರಿಗೆ ವೀಸಾಗಳನ್ನು ಸ್ಥಗಿತಗೊಳಿಸಿದೆ” ಎಂಬ ಶೀರ್ಷಿಕೆಯ ಲೇಖನದಲ್ಲಿ ಬಿಬಿಸಿ ಭಯೋತ್ಪಾದಕ ದಾಳಿಯನ್ನು “ಬಂಡುಕೋರರ ದಾಳಿ” ಎಂದು ಉಲ್ಲೇಖಿಸಿದೆ. ಬಿಬಿಸಿಗೆ ಬರೆದ ಔಪಚಾರಿಕ ಪತ್ರದಲ್ಲಿ, ವಿದೇಶಾಂಗ ಸಚಿವಾಲಯವು ಬಿಬಿಸಿಯ ವರದಿಯನ್ನು ಮೇಲ್ವಿಚಾರಣೆ ಮಾಡಲಿದೆ ಎಂದು ಸರ್ಕಾರ ತಿಳಿಸಿದೆ.