ಬೆಂಗಳೂರು : ಪಹಲ್ಗಾಂ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದ್ದು, ಇದೀಗ ಇಂದು ಸಂಜೆ 5 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಈ ಒಂದು ಕದನ ವಿರಾಮ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು,ಕದನ ವಿರಾಮದ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಮೊದಲಿಗೆ ಸಿಎಂ ಹೇಳಿದರು. ಆಗ ಪಕ್ಕದಲ್ಲೇ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಅವರು, ಕದನ ವಿರಾಮ ಘೋಷಣೆ ಆಗಿರುವ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು. ಆಗ ಮಾತನಾಡಿದ ಸಿದ್ದರಾಮಯ್ಯ, ಕದನ ವಿರಾಮವನ್ನು ಸ್ವಾಗತಿಸಿದರು.
ಯುದ್ಧ ವಿರಾಮ ಘೋಷಣೆಯಾಗಿದೆ ಅಂತ ಸರ್ಕಾರವೇನೂ ಕೈಕಟ್ಟಿ ಕೂರೋದಿಲ್ಲ, ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು. ಕರ್ನಾಟಕದಲ್ಲಿದ್ದ ಎಲ್ಲ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸಲಾಗಿದೆ ಎಂದು ಹೇಳಿದರು.
ಅದರೆ ಮೈಸೂರಲ್ಲಿ 6ವರ್ಷದೊಳಗಿನ ಮೂರು ಮಕ್ಕಳು ಉಳಿದುಕೊಂಡು ಬಿಟ್ಟಿವೆ, ಅವರ ತಂದೆ ಪಾಕಿಸ್ತಾನಿ ಮತ್ತು ತಾಯಿ ಮೈಸೂರಿನವರು, ಅವರನ್ನು ಬಾರ್ಡರ್ವರೆಗೆ ಕರೆದೊಯ್ಯಲಾಗಿತ್ತು, ಅದರೆ ಪಾಕಿಸ್ತಾನದೊಳಗೆ ಒಯ್ಯಲು ಯಾರೂ ಬಾರದ ಕಾರಣ ವಾಪಸ್ಸು ತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.