ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು ಒಂದು ಕೋಟಿ 45 ಲಕ್ಷ ಮೌಲ್ಯದ ನಿಷೇಧಿತ ನಿಕೋಟಿನ್ ಉತ್ಪನ್ನವನ್ನ ವಶಕ್ಕೆ ಪಡೆದಿದ್ದು, 9 ಜನರನ್ನು ಬಂಧಿಸಿದ್ದಾರೆ.
ಚಾಮರಾಜಪೇಟೆ, ಮಹಾದೇವಪುರ,ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಿಷೇಧಿತ ಹುಕ್ಕಾ ನಿಕೋಟಿನ್ ಉತ್ಪನ್ನಗಳನ್ನ ಅನಧಿಕೃತವಾಗಿ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಎಂದು ತಿಳಿದುಬಂದಿದೆ.
ದಾಳಿ ವೇಳೆ 1 ಕೋಟಿ 45 ಲಕ್ಷ ಮೌಲ್ಯದ ನಿಕೋಟಿನ್ ಉತ್ಪನ್ನ, 1.10 ಲಕ್ಷ ನಗದು, 11 ಮೊಬೈಲ್ 1 ಟಾಟಾ ಏಸ್ ವಾಹನವನ್ನ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಂಭತ್ತು ಮಂದಿಯನ್ನ ಬಂಧಿಸಿದ್ದಾರೆ.ಸಿಸಿಬಿ ಮಹಿಳಾ ಸಂರಕ್ಷಣದಳದಿಂದ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.