ಬೆಂಗಳೂರು : ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ‘ಫಿಕ್ಸಿಸ್’ ಎನ್ನುವ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಸಿಸಿಬಿ ಸ್ಪಾ ಮೇಲೆ ದಾಳಿ ಮಾಡಿದೆ. ಬೆಂಗಳೂರಿನ ರಿಚ್ಮಂಡ್ ಟೌನ್ ನಲ್ಲಿರುವ ಫಿಕ್ಸಿಸ್ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿಸಿಬಿ ದಾಳಿ ವೇಳೆ ಬಾಂಗ್ಲಾದೇಶದ ಅಜಯಶೂರ ಜಿಲ್ಲೆಯ ಕುಲ್ನ ಪ್ರದೇಶದ ಯುವತಿ ಪತ್ತೆಯಾಗಿದ್ದಾಳೆ. ಫಿಕ್ಸಿಸ್ ಸ್ಪಾನಲಿ ಸಿಸಿಬಿ ಅಧಿಕಾರಿಗಳು ಇದೀಗ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.