ಬೆಂಗಳೂರು : ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮೊಬೈಲ್ ಖರೀಮರನ್ನು ಇದೀಗ ಒದ್ದು ಒಳಗಡೆ ಹಾಕಿದ್ದು, ಮೊಬೈಲ್ ಎಗರಿಸುತ್ತಿದ್ದ 42 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ 3.36 ಕೋಟಿ ಮೌಲ್ಯದ ಮೊಬೈಲ್ ಫೋನ್ ಗಳನ್ನು ಸೀಜ್ ಮಾಡಿದ್ದಾರೆ.
ಹೌದು ಒಟ್ಟು 1,949 ಮೊಬೈಲ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಕೇವಲ ಆರು ಮಂದಿ ಕಳ್ಳರಿಂದ 450 ಮೊಬೈಲ್ ಮಾಡಿದ್ದಾರೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ಮೊಬೈಲ್ ಕಳ್ಳರ ಖತರ್ನಾಕ್ ಐಡಿಯಾ ಬಯಲಾಗಿದ್ದು, ವಿಚಾರಣೆ ವೇಳೆ ಕಳ್ಳರು ಬಾಯಿ ಬಿಟ್ಟ ಸತ್ಯ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಬಸ್ ನಲ್ಲಿ ಐದಾರು ಕಳ್ಳರು ಒಟ್ಟಿಗೆ ಬರುತ್ತಿದ್ದರು. ಪ್ರಯಾಣಿಕರ ಗಮನ ಬೇರೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು.
ಬಳಿಕ ಒಬ್ಬರಿಂದ ಒಬ್ಬರಿಗೆ ಮೊಬೈಲ್ ಶಿಫ್ಟ್ ಆಗುತ್ತಿತ್ತು. ಬಳಿಕ ಅಲುಮಿನಿಯಂ ಫೈಲ್ ನಲ್ಲಿ ಮೊಬೈಲ್ ಸುತ್ತಿಡುತ್ತಿದ್ದರು ಕೂಡಲೇ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತಿತ್ತು ತಕ್ಷಣ ಯಾರೇ ಕರೆ ಮಾಡಿದರು ಕಾಲ್ ರಿಚ್ ಆಗುತ್ತಿರಲಿಲ್ಲ ಮೊಬೈಲ್ ಸ್ವಿಚ್ ಆಫ್ ಅಥವಾ ಬ್ಯುಸಿ ಅಂತ ಬರುತ್ತದೆ ಈ ಟೆಕ್ನಿಕ್ ಉಪಯೋಗಿಸಿ ಕಳ್ಳರು ಮೊಬೈಲ್ ಎಗರಿಸುತ್ತಿದ್ದರು.








