ಬೆಂಗಳೂರು : ಕಳೆದ ಮೇ 20 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿಲಾಗಿತ್ತು. ಈ ಒಂದು ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಒಂದು ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಕೂಡ ಭಾಗಿಯಾಗಿದ್ದು ಇದೀಗ ಸಿಸಿಬಿ ವಿಚಾರಣೆಗೆ ಹೇಮಾ ಅವರು ಹಾಜರಾಗಿದ್ದು ಅವರನ್ನು ಬಂಧಿಸಿದ್ದಾರೆ ಎಂದು ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರು ಹೊರಗಡೆ ಬಂದು ವಿಡಿಯೋ ರೆಕಾರ್ಡ್ ಮಾಡಿ ಪ್ರಕರಣದ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಅಲ್ಲದೆ ಸಿಸಿಬಿ ವಿಚಾರಣೆಗೆ ಹಾಜರಾಗಿ ಎಂದು ಎರಡು ಬಾರಿ ನೋಟಿಸ್ ನೀಡಿದರೂ ಕೂಡ ಹೇಮಾ ಅವರು ಅದಕ್ಕೆ ಕ್ಯಾರೆ ಅನ್ನದೆ ವಿಚಾರಣೆಗೆ ಗೈರಾಗಿದ್ದರು. ಇದೀಗ ತೆಲುಗು ನಟಿ ಹೇಮಾಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ನಟಿ ಹೇಮಾ ಅವರು ಬುರ್ಖಾಹಾಕಿಕೊಂಡು ವಿಚಾರಣೆಗೆ ಬಂದಿದ್ದರು ಪಾರ್ಟಿಯಲ್ಲಿ ಹೇಮಾ ಡ್ರಗ್ಸ್ ಸೇವಿಸಿರುವುದು ಬಯಲಾಗಿತ್ತು ವಿಚಾರಣೆಯ ವೇಳೆ ಸಮರ್ಪಕವಾದಂತ ನೀಡದಿದ್ದಕ್ಕೆ ಬಂಧಿಸಲಾಗಿದೆ. ರೇವ್ ಪಾರ್ಟಿ ಎಲ್ಲಿ ನಟಿ ಹೇಮಾ ಕೂಡ ಭಾಗಿಯಾಗಿದ್ದರು. ಅಲ್ಲದೆ ವಿಚಾರಣೆಯ ವೇಳೆ ಗುಟ್ಕಾ ಹಾಕಿಕೊಂಡು ಬಂದಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಹಾಗಾಗಿ ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದು 24 ಗಂಟೆಯ ಒಳಗಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ನಾಳೆ ಬೆಳಗ್ಗೆ ಕೋರ್ಟ್ ಮುಂದೆ ನಟಿ ಹೇಮಾ ಅವರನ್ನು ಹಾಜರುಪಡಿಸಲಾಗುತ್ತದೆ. ನ್ಯಾಯಾಲಯದ ಮುಂದೆ ಸಿಸಿಬಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಇದೀಗ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೇಮಾಗೆ ಮೆಡಿಕಲ್ ಟೆಸ್ಟ್ ಮಾಡುವಂತಹ ಪ್ರಕ್ರಿಯೆ ನಡೆಯುತ್ತಿದೆ. ಮೆಡಿಕಲ್ ಟೆಸ್ಟ್ ಪ್ರಕ್ರಿಯೆ ಮುಗಿದ ಬಳಿಕ ನಾಳೆ ನ್ಯಾಯಾಧೀಶರ ಮುಂದೆ ಸಿಸಿಬಿ ಅಧಿಕಾರಿಗಳು ನಟಿ ಹೇಮವರನ್ನು ಹಾಜರುಪಡಿಸಲಿದ್ದಾರೆ.