ಬೆಂಗಳೂರು : ನಿಷೇಧಿತ ಈ ಸಿಗರೇಟ್ ಗಳನ್ನು ಮಾರಾಟ ಮಾಡುತಿದ್ದ ಕೇರಳ ಮೂಲದ ವ್ಯಕ್ತಿ ಒಬ್ಬನನ್ನು ಸಿಸಿಬಿ ಅಧಿಕಾರಿಗಳು ಆತನ ಮನೆಯ ಮೇಲೆ ದಾಳಿ ನಡೆಸಿ ಸುಮಾರು ಮೂರು ಕೋಟಿಗೂ ಅಧಿಕ ಮೌಲ್ಯದ ಈ ಸೀರೀಡ್ಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುದ್ಧಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ನಿಷೇಧಿತ ಮೂರು ಕೋಟಿ ಮೌಲ್ಯದ ಈ ಸಿಗರೇಟ್ ವಶ ಪಡಿಸಿಕೊಂಡಿದ್ದು, ಸುದ್ದಕುಂಟೆ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಶೋಹೇಬ್ ಮನೆಯಲ್ಲಿದ್ದ ಈ ಸಿಗರೇಟ್ ಅನ್ನು ಪೊಲೀಸರು ಇದೀಗ ದಾಳಿ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ.ಕೇರಳ ಮೂಲದ ಶೋಹೇಬ್ ಎನ್ನುವ ವ್ಯಕ್ತಿಯನ್ನು ಸಿಸಿಬಿ ತಂಡ ಬಂಧಿಸಿದೆ.
ದುಬೈನಿಂದ ಬೆಂಗಳೂರಿಗೆ ಈ ಸಿಗರೇಟ್ ಗಳನ್ನು ತರಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಎಂದು ತಿಳಿದುಬಂದಿದೆ. ಅಲ್ಲದೆ ಆನ್ಲೈನ್ ಮೂಲಕ ಆರೋಪಿ ಶೋ ಹೆಬ್ ಈ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು ಒಂದು ಸಿಗರೇಟ್ ಗೆ 5000 ರಿಂದ ರೂ.6000 ಮಾರುತ್ತಿದ್ದ ಎನ್ನಲಾಗಿದೆ. ಪ್ರಕರಣವು ಶುದ್ಧಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.