ನವದೆಹಲಿ : ವಿದೇಶದಲ್ಲಿ ಉದ್ಯೋಗ ನೀಡುವ ಸೋಗಿನಲ್ಲಿ ಭಾರತೀಯರನ್ನ ರಷ್ಯಾ-ಉಕ್ರೇನ್ ಯುದ್ಧ ವಲಯಕ್ಕೆ ಕರೆದೊಯ್ದಿದ್ದ ಪ್ರಮುಖ ಮಾನವ ಕಳ್ಳಸಾಗಣೆ ಜಾಲವನ್ನ ಸಿಬಿಐ ಭೇದಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಏಳು ನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಜೆನ್ಸಿ ಶೋಧ ನಡೆಸುತ್ತಿದೆ ಎಂದು ಅವರು ಹೇಳಿದರು.
ವಿವಿಧ ವೀಸಾ ಸಲಹಾ ಸಂಸ್ಥೆಗಳು ಮತ್ತು ಏಜೆಂಟರ ವಿರುದ್ಧ ಏಜೆನ್ಸಿ ಎಫ್ಐಆರ್ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಧದ ಸಮಯದಲ್ಲಿ ಹಲವಾರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು 50 ಲಕ್ಷ ರೂ.ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
‘ಪ್ರಧಾನಿ ಮೋದಿ’ಗೆ ಪಾಕ್ ಪ್ರಧಾನಿಯಾಗಿ ಪುನರಾಯ್ಕೆಯಾದ ‘ಶೆಹಬಾಜ್ ಷರೀಫ್’ ಧನ್ಯವಾದ
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಪ್ರಕಟ: ಇಲ್ಲಿದೆ ‘ಪ್ರಶಸ್ತಿ ಪುರಸ್ಕೃತ ಚಿತ್ರ’ಗಳ ಪಟ್ಟಿ