ನವದೆಹಲಿ : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪುನರಾಯ್ಕೆಯಾದ ಭಾರತದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಷರೀಫ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ ಒಂದು ದಿನದ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಉತ್ತರ ನೀಡಿದ್ದಾರೆ. “ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ನನಗೆ ಅಭಿನಂದನೆ ಸಲ್ಲಿಸಿದ ನರೇಂದ್ರ ಮೋದಿ ಅವ್ರಿಗೆ ಧನ್ಯವಾದಗಳು” ಎಂದು ಶೆಹಬಾಜ್ ಬರೆದಿದ್ದಾರೆ.
Thank you @narendramodi for felicitations on my election as the Prime Minister of Pakistan 🇵🇰
— Shehbaz Sharif (@CMShehbaz) March 7, 2024
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಸುಮಾರು ಒಂದು ತಿಂಗಳ ನಂತರ ಷರೀಫ್ ಸೋಮವಾರ ಪಾಕಿಸ್ತಾನದ 24 ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ನೇತೃತ್ವದ ಆರು ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಶೆಹಬಾಜ್ ಅವರು ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಅಧ್ಯಕ್ಷ ಆರಿಫ್ ಅಲ್ವಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ, ಎಲ್ಪಿಜಿ ಸಿಲಿಂಡರ್’ಗಳ ಮೇಲಿನ ‘ಸಬ್ಸಿಡಿ’ ವಿಸ್ತರಣೆ
ನಾಳೆ ‘ಶಿವಾಲಯ’ಗಳಲ್ಲಿ ‘ಶಿವರಾತ್ರಿ ವೈಭವ’: ‘ಮಹಾ ಉತ್ಸವ’ ಆಚರಿಸಲು ‘ಮುಜರಾಯಿ ಇಲಾಖೆ’ ಆದೇಶ
‘CBSE CTET ಪರೀಕ್ಷೆ’ಗೆ ನೋಂದಣಿ ಪ್ರಕ್ರಿಯೆ ಆರಂಭ ; ನೇರ ಲಿಂಕ್ ಇಲ್ಲಿದೆ, ಈ ರೀತಿ ಅಪ್ಲೈ ಮಾಡಿ