ಮಂಡ್ಯ : ಹಿಂದಿನ ಕಾಲದಲ್ಲಿ ಇದ್ದಂತಹ ಜಾತಿ ತಾರತಮ್ಯ ಪ್ರಸ್ತುತ ದೇಶದ ಹಲವು ಪ್ರದೇಶಗಳಲ್ಲಿ ಇನ್ನು ಆಚರಣೆಯಲ್ಲಿ ಇದೆ. ರಾಜ್ಯದಲ್ಲಿ ಇದೀಗ ಜಾತಿ ತಾರತಮ್ಯ ಮತ್ತೆ ಭುಗಿಲೆದಿದ್ದು ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ದಲಿತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ವಿಚಾರವಾಗಿ ಸವರ್ಣಿಯರು ಅಸಮಾಧಾನ ಹೊರಹಾಕಿದ್ದು, ಇದೀಗ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಮಂಡ್ಯದ ಹನಕೆರೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ವಿರೋಧದ ನಡುವೆ ಶ್ರೀ ಕಾಲಭೈಲೇಶ್ವರನಿಗೆ ದಲಿತರು ಪೂಜೆ ಸಲ್ಲಿಸಿದ್ದಾರೆ. ದಲಿತರ ದೇಗುಲಕ್ಕೆ ಪ್ರವೇಶಕ್ಕೆ ಸವರ್ಣೀಯರು ಸಮಾಧಾನ ಹೊರ ಹಾಕಿದ್ದಾರೆ.
ದೇಗುಲದ ಒಳನೋಗಿ ಉತ್ಸವ ಮೂರ್ತಿಯನ್ನು ಹೊರ ತಂದು ಕಿಡಿ ಕಾರಿದ್ದಾರೆ. ದೇವಾಲಯ ನಾಮಫಲಕವನ್ನು ಹೊರಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಶ್ರೀ ಕಾಲಭೈರವೇಶ್ವರ ಸ್ವಾಮೀಜಿ ಬಾಗಿಲು ಬಂದಾಗಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ಮತ್ತು ಪೊಲೀಸರು ತಿಳಿಗೊಳಿಸಿದ್ದಾರೆ.
ಇದೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಸವರ್ಣಿಯರು ಅಲ್ಲಿಂದ ತೆರಳಿದ್ದಾರೆ. ಮತ್ತೊಂದು ಕೊಠಡಿಯಲ್ಲಿ ಸವರ್ಣಯರು ಉತ್ಸವ ಮೂರ್ತಿಯನ್ನು ಇಟ್ಟಿದ್ದಾರೆ.ಸಂಜೆ ಉತ್ಸವ ಮೂರ್ತಿಯನ್ನು ದೇಗುಲಕ್ಕೆ ಕೊಂಡೋಯ್ಯಲು ನಿರ್ಧಾರ ಮಾಡಿದ್ದಾರೆ.