ಬೆಂಗಳೂರು : ಬೆಂಗಳೂರಿನಲ್ಲಿ ಬೀದಿ ಕಾಮಣ್ಣನರ ಕಾಟ ಹೆಚ್ಚಾಗಿದ್ದು ಕಳೆದ ಒಂದು ತಿಂಗಳ ಹಿಂದೆ ರಸ್ತೆ ಬದಿಯಲ್ಲಿ ನಿಂತಿದ್ದ ವೈದ್ಯೆಗೆ ಕಾಮುಕನೊಬ್ಬ ಬಂದು ವೈದ್ಯೆಗೆ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿ ರಾಕೇಶ್ (24) ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಚಿಕ್ಕಬಾಣಾವರದ ಎಜಿಬಿ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಕೆಲಸ ಮುಗಿಸಿ ವೈದ್ಯೆ ತನ್ನ ಪಿಜಿ ಒಳಗೆ ಹೋಗುತ್ತಿದ್ದರು. ಈ ವೇಳೆ ಸ್ಕೂಟರ್ ನಲ್ಲಿ ಅಪರಿಚಿತ ಒಬ್ಬ ಹಿಂಬಾಲಿಸಿಕೊಂಡು ಬಂದಿದ್ದ ವೈದ್ಯೆ ಬಳಿ ಬಂದು ಬಸ್ ನಿಲ್ದಾಣದ ಬಗ್ಗೆ ಕಾಮುಕ ಕೇಳಿದ್ದಾನೆ. ನಂತರ ಸ್ಕೂಟರ್ ನಲ್ಲಿ ವೈದ್ಯಯನ್ನು ಮುಟ್ಟಿ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಕಾಮುಕನ ಕಾಟ ಕಂಡು ವೈದ್ಯ ಕಿರುಚಡಲು ಪ್ರಾರಂಭಿಸಿದ್ದಾರೆ. ಕಿರುಚಾಟ ಕಂಡು ಅಲ್ಲಿಂದ ಕಾಮುಕ ಪರಾರಿಯಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.








