ಹಾವೇರಿ : ಇತ್ತೀಚಿಗೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಠಾಣೆಗೆ ಪೋಷಕರು ಕರೆದುಕೊಂಡು ಹೋಗಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸವನೂರು ಸಿಪಿಐ ಹಾಗೂ ಸರ್ವ ಹೆಡ್ ಕಾನ್ಸ್ಟೇಬಲ್ ಅನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ.
ಸವಣೂರಿನ ಸಿಪಿಐ ದೇವಾನಂದ ಹಾಗೂ ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಅವರನ್ನು ಅಮಾನತು ಮಾಡಲಾಗಿದೆ. ಡಿ.10 ರಂದು ಸವಣೂರು ಪಟ್ಟಣದಲ್ಲಿ ಶಿಕ್ಷಕ ಜಗದೀಶ್ ಎಂಬಾತನ ಮೇಲೆ ರ್ವಜನಿಕವಾಗಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮತ್ತು ಧರ್ಮದೇಟು ನೀಡಿ ಹಲ್ಲೆ ನಡೆಸಲಾಗಿತ್ತು. ಸ್ಥಳೀಯರು ಬೀದಿ ಬೀದಿಯಲ್ಲಿ ಹಲ್ಲೆ ಮಾಡಿ ಮೆರವಣಿಗೆ ಮಾಡಿದ್ದರು. ಈ ಸಂಬಂಧ ಸವಣೂರಿನ ಪೋಲಿಸರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿ ಚಪ್ಪಲಿ ಹಾರ ಹಾಕಿ ಸ್ಥಳೀಯರು ಮೆರವಣಿಗೆ ಮಾಡಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡಿದ ಆರೋಪದಡಿ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಆದೇಶ ಹೊರಡಿಸಿದ್ದಾರೆ.








