ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಮತ್ತಷ್ಟು ಪೊಲೀಸ್ ನೀಡಲಾಗಿದ್ದು, ಮತ್ತೆ ಒಂಬತ್ತು ಪೊಲೀಸರನ್ನು SIT ಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಡಿಜಿ ಮತ್ತು ಐಜಿಪಿ ಡಾ. ಎಂ.ಎ ಸಲೀಂ ಅವರು 9 ಪೊಲೀಸರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆಗೆ ಈಗಾಗಲೇ 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.ಇದೀಗ ಮತ್ತೆ ಒಂಬತ್ತು ಮಂದಿ ಪೊಲೀಸರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್ಐ ಲಾರೆನ್ಸ್, ವಿಟ್ಲ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮನೋಜ್, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಂದೀಪ್, ಉಡುಪಿ ಸಿ ಎಸ್ ಪಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಲೋಕೇಶ್, ಹೊನ್ನಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸತೀಶ್ ನಾಯಕ್, ಮಂಗಳೂರು ಹೆಡ್ ಕಾನ್ಸ್ಟೇಬಲ್ ಜಯರಾಮಗೌಡ, ಎಚ್.ಸಿ ಬಾಲಕೃಷ್ಣ ಗೌಡ ನೇಮಕ ಮಾಡಿ ಡಾ. ಎಂ.ಎ ಸಲೀಂ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದ ವರೆಗೆ ಎಸ್ಐಟಿಗೆ ವರದಿ ಮಾಡಿಕೊಡಲು ಸೂಚನೆ ನೀಡಿದ್ದಾರೆ.