ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಅಸ್ತಿಪಂಜರಿಗಳಿಗಾಗಿ ಇಂದು ಶೋಧ ಕಾರ್ಯ ಮುಂದುವರೆಯಲಿದೆ. ನೇತ್ರಾವತಿ ನದಿ ತೀರದಲ್ಲಿ ಎಸ್ಐಟಿ ತಂಡ ಶೋಧ ಕಾರ್ಯಕ್ರಮ ನಡೆಸಲಿದೆ. ಇದುವರೆಗೂ ಐದು ಕಡೆ ಶೋಧ ಕಾರ್ಯ ಮುಗಿಸಿರುವ SIT ತಂಡ, ಮೊದಲ ದಿನ ಒಂದು ಕಡೆ ಅಸ್ತಿಪಜರಕ್ಕಾಗಿ ಶೋಧ ನಡೆಸಿತ್ತು.
ಬಳಿಕ ನಿನ್ನೆ ಎರಡು ಮೂರು ನಾಲ್ಕು ಹಾಗೂ ಐದನೇ ಪಾಯಿಂಟ್ ನಲ್ಲಿ ಶೋಧ ನೆಡಿಸಲಾಗಿತ್ತು ಇಂದು ಆರನೇ ಪಾಯಿಂಟ್ ನಲ್ಲಿ ಎಸ್ಐಟಿ ಶೋಧ ನಡೆಸಲಿದೆ ಬೆಳಿಗ್ಗೆ 10ಗಂಟೆ ಯಿಂದ ಈ ಒಂದು ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಎರಡು ದಿನಗಳ ಕಾಲ ಅಸ್ತಿಪಂಜರಿಗಳಿಗಾಗಿ ನೆಲ ಹಾಗೆ ಯುವ ಕಾರ್ಯ ನಡೆಸಿದ SIT ಇದುವರೆಗೂ ಯಾವುದೇ ರೀತಿಯಾದ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಇದೀಗ ಮೂರನೇ ದಿನವೂ ಅಸ್ತಿಪಂಜರಗಳಿಗಾಗಿ ಶೋಧ ಕಾರ್ಯಕ್ರಮ ಮುಂದುವರಿಸಲಿದೆ.