ಬೆಂಗಳೂರು : ಬಿಜೆಪಿ ಸಂಸದ ಡಾ.ಕೆ ಸುಧಾಕರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ 4.8 ಕೋಟಿ ಹಣ ದೊರೆತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಂಸದ ಡಾಕ್ಟರ್ ಕೆ ಸುಧಾಕರ್ ವಿರುದ್ಧ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ನ್ಯಾ.ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದ್ದು, ಸಂಸತ್ ಚುನಾವಣೆಯ ವೇಳೆ ಗೋವಿಂದಪ್ಪ ಮನೆಯಲ್ಲಿ ನಾಲ್ಕು ಪಾಯಿಂಟ್ ಎಂಟು ಕೋಟಿ ಹಣ ಜತ್ತಿ ಮಾಡಲಾಗಿತ್ತು ಈ ವೇಳೆ ಐಎಎಸ್ ಅಧಿಕಾರಿ ಮುನೇಶ್ ಮೊದಿಗಿಲ್ ಗೆ ಕೆ ಸುಧಾಕರ್ ಕರೆ ಮಾಡಿದರು ಸಹಾಯ ಮಾಡುವಂತೆ ವಾಟ್ಸಾಪ್ ಮತ್ತು ಮೆಸೇಜ್ ಮಾಡಿ ಸಹಾಯ ಮಾಡುವಂತೆ ಕೇಳಿದರು ಎನ್ನುವ ಆರೋಪ ಕೇಳಿ ಬಂದಿತ್ತು ಮತದಾರರಿಗೆ ಲಂಚ ನೀಡಲು ಮುಂದಾಗಿದ್ದ ಬಗ್ಗೆ ದೂರು ದಾಖಲಾಗಿತ್ತು ಗೋವಿಂದಪ್ಪ ವಿರುದ್ಧ ಆರೋಪಟ್ಟಿ ಸಲ್ಲಿಸಿದ್ದರು ಇದೀಗ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.