ಬೆಂಗಳೂರು : ಮಾಜಿ ಸಂಸದೆ ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಪ್ರಮುಖ A1 ಆರೋಪಿ ಪ್ರಮೋದ್ ಗೌಡ (18) ನನ್ನು ಇಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಆರ್ ಪುರಂ ಮೂಲದ ಪ್ರಮೋದನ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮೋದ್ ಫ್ರೆಂಡ್ ಮೊಬೈಲ್ ನಲ್ಲಿ ಜಾಲತಾಣ ಓಪನ್ ಮಾಡಿದ್ದ. ಈ ವೇಳೆ ಪ್ರಮೋದ್ ಫ್ರೆಂಡ್ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಈ ಕುರಿತಂತೆ ನಟಿ ರಮ್ಯಾ ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಕಮಿಷನರ್ ಸಿಸಿಬಿಗೆ ವರ್ಗಾಯಿಸಿದರು.
ಈ ವೇಳೆ ಸಿಸಿಬಿ ಸುಮಾರು 48 ಐಡಿ ಪತ್ತೆ ಮಾಡಿದ್ದು ಅದರಲ್ಲಿ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣದ A1 ಆರೋಪಿಯಾಗಿರುವ ಪ್ರಮೋದ್ ಗೌಡನನ್ನು ಅರೆಸ್ಟ್ ಮಾಡಿದ್ದಾರೆ.