ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ನ ಬಾತ್ರೂಮ್ ನಲ್ಲಿ ಇಟ್ಟಿಗೆ ಒಂದಕ್ಕೆ ನೇಣು ಬಿಗಿದುಕೊಂಡು ಕಾರ್ಪೆಂಟರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕಾರ್ಪೆಂಟರ್ ಅನ್ನು ಉಡುಪಿ ಜಿಲ್ಲೆಯ ಮುಲ್ಕಿಯ ಜಯರಾಮ್ (40) ಎಂದು ತಿಳಿದುಬಂದಿದೆ. ಇತ್ತೀಚಿಗೆ ಜಯರಾಮ್ ಅವರ ಚಿಕ್ಕಮ್ಮ ವಯೋ ಸಹಜ ಕಾಯಿಲೆಯಿಂದ ಮರತ ಪಟ್ಟಿದ್ದರು ಇದರಿಂದ ಮನನೊಂದ ಜಯರಾಮ ಮದ್ಯ ವ್ಯಸನಿಯಾಗಿದ್ದರು. ಬಳಿಕ ಜಯರಾಮ್ ಸಹೋದರ ವಾಸುದೇವ್, ಮಧ್ಯದ ಚಟ ಬಿಡಿಸಿ ಉಡುಪಿಯಿಂದ ಬೆಂಗಳೂರಿಗೆ ಕೆಲಸಕ್ಕೆ ಕರೆದುಕೊಂಡು ಬಂದಿದ್ದರು.
ಬೆಂಗಳೂರಿನ ಕೋರಮಂಗಲದ ಖಾಸಗಿ ಹೋಟೆಲ್ನಲ್ಲಿ ಜಯರಾಮ್ ಸಹೋದರ ವಾಸುದೇವ ಸೇರಿದಂತೆ ಇತರೆ ಇಬ್ಬರು ತಂಗಿದ್ದರು. ರಾತ್ರಿ ಊಟ ಮಾಡಿದ ಬಳಿಕ ಎಲ್ಲರೂ ಮಲಗಿದ್ದಾಗ ಜಯರಾಮ್ ಬಾತ್ರೂಮ್ ಗೆ ಹೋಗಿ ಕೆಟಕಿಗೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಜಾನೆ ಸಹೋದರ ವಾಸುದೇವ್, ಬಾತ್‌ರೂಮ್ ಬಾಗಿಲು ಒಡಿದರೂ ಪ್ರತಿಕ್ರಿಯೆ ಬಂದಿಲ್ಲ.
ಬಳಿಕ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.








