ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಉನ್ನತ ಶಿಕ್ಷಣ ಸಚಿವಸಚಿವ ಡಾ. ಎಂ ಸಿ ಸುಧಾಕರ್ ಅವರ ನಿವಾಸದ ಬಳಿ ದುರಂತ ಒಂದು ನಡೆದಿದ್ದು, ಅವರ ನಿವಾಸದ ಬಳಿ ಸ್ಕಾರ್ಪಿಯೊ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ನಡೆದಿದೆ.
ಸಚಿವ ಡಾ. ಎಂ.ಸಿ ಸುಧಾಕರ್ ನಿವಾಸದ ಬಳಿ ಹೊತ್ತಿ ಉರಿದ ಕಾರನ್ನು ಸ್ಕಾರ್ಪಿಯೋ ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮಾಡಪ್ಪಲ್ಲಿ ಬಡಾವಣೆಯಲ್ಲಿರುವ ನಿವಾಸದ ಬಳಿ ಈ ಅವಘಡ ಸಂಭವಿಸಿದೆ. KA 04 MG 0455 ಸಂಖ್ಯೆಯ ಸ್ಕಾರ್ಪಿಯೋ ಕಾರು ಹೊತ್ತಿ ಉರಿದಿದೆ.
ಸಚಿವ ಸುಧಾಕರ್ ಅವರ ನಿವಾಸದ ಸಮೀಪವೇ ಈ ಒಂದು ಕಾರನ್ನು ನಿಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ . ಘಟನೆಯ ಬಳಿಕ ಸ್ಕಾರ್ಪಿಯೋ ಕಾರು ಮಾಲಿಕ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಘಟನೆ ಕುರಿತಂತೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.